ವಾಹನಗಳ ಬಹಿರಂಗ ಹರಾಜು



ಹಾಸನ.ಅ.23(ಕರ್ನಾಟಕ ವಾರ್ತೆ):- ಸಕಲೇಶಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ತೆರಿಗೆ ಪಾವತಿಸದ 8 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ವಾಹನ ಮಾಲೀಕರಾಗಲಿ ಅಥವಾ ಚಾಲಕರಾಗಲಿ ಬಿಡುಗಡೆಗೊಳಿಸಿಕೊಳ್ಳಲು ಮುಂದಾಗದ ಕಾರಣ ವಾಹನಗಳನ್ನು ನ.11 ರಂದು ಬೆಳಿಗ್ಗೆ 11 ಗಂಟೆಗೆ ಆಲೂರು ಪೊಲೀಸ್ ಠಾಣೆ  ಹಾಗೂ ಸಕಲೇಶಪುರ ಎ.ಆರ್.ಟಿ.ಓ ಕಚೇರಿ ಮುಂಭಾಗ  ವಾಹನಗಳನ್ನು ಬಹಿರಂಗ ಹರಾಜು ಮಾಡಲಾಗುವುದು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ವಾಹನ ನೊಂದಣಿ ಸಂಖ್ಯೆ ಕೆ.ಎ 13 ಎ 5849 ಮ್ಯಾಕ್ಸಿಕ್ಯಾಬ್, ಕೆ.ಎ 04 6116 ಮ್ಯಾಕ್ಸಿಕ್ಯಾಬ್,  ಕೆ.ಎ 35 .1880 ಹೆಚ್.ಜಿ.ವಿ, ಕೆ.ಎ 51 ಎ 0004 ಲ .ಟ್ಯಾಕ್ಸಿ, ಚಾಸಿಸ್ ನಂ. 01ಂ20ಅ25808ಮೊಟಾರ್ ಸೈಕಲ್, MBLJA12ACE9D027  ಮೊಟಾರ್ ಸೈಕಲ್, 774590091540 ಮೊಟಾರ್ ಸೈಕಲ್ ಹಾಗೂ MD626BG4XFIN42410 ಮೊಟಾರ್ ಸೈಕಲ್ ಈ ವಾಹನಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಹರಾಜಿಗೆ ಮುಂಚಿತವಾಗಿಯೇ ವಾಹನಗಳನ್ನು ಪರಿಶೀಲಿಸುವ ಅವಕಾಶವಿದೆ. 

ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಕಡ್ಡಾಯವಾಗಿ ಜಿ.ಎಸ್.ಟಿ ಸಂಖ್ಯೆ ಹೊಂದಿರತಕ್ಕದ್ದು, ಬಹಿರಂಗ ಹರಾಜಿನಲ್ಲಿ ಭಾಗವಹಿಸುವವರು 5000ರೂ ಮುಂಗಡ ಹಣ ಸಂದಾಯ ಮಾಡಿ ರಶೀದಿ ಪಡೆಯಬೇಕು ಮತ್ತು ವಾಹನ ಖರೀದಿ ಮಾಡಿದವರು ಸ್ಥಳದಲ್ಲಿ 50% ಹಣ ಸಂದಾಯ ಮಾಡಬೇಕು ಮತ್ತು ನಿಯಮಾನುಸಾರ ಜಿ.ಎಸ್.ಟಿ ಸಂದಾಯ ಮಾಡಿ ವಾಹನದ ತೆರಿಗೆ ಮತ್ತು ಶುಲ್ಕ ಮತ್ತು ವಿಮೆ ಮಾಡಿಸಿ ವಾಹನ ಪಡೆಯತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
******

Post a Comment

0 Comments