೩ ತಿಂಗಳ ಹನಿಮೂನ್ ಸಮಯ ಮುಗಿತು,೨೫ ಗ್ರಾಮಗಳ ಸಮಸ್ಯೆ ಪರಿಹರಿಸಲಿ, ಶಾಸಕ ಸ್ವರೂಪ್ ಗೆ ಪ್ರೀತಂಗೌಡ ಸಲಹೆ


ಹಾಸನ: ಎಂ.ಎಲ್.ಎ. ಚುನಾವಣೆ ಆಗಿ ಮೂರು ತಿಂಗಳ ಹನಿಮೂನ್ ಸಮಯ ಕೂಡ ಮುಗಿದಿದ್ದು, ಜಿಲ್ಲಾ ಉಸ್ತುವಾರಿ ಹಾಸನ ಕ್ಷೇತ್ರದ ಶಾಸಕರು ನಗರಪಾಲಿಕೆಗೆ ಸೇರಿರುವ ೨೫ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸುವ ಕಡೆ ಗಮನ ನೀಡಿ ಅಭಿವೃದ್ಧಿ ಕೆಲಸ ಮಾಡಬೇಕೆಂದು ಮಾಜಿ ಶಾಸಕ ಪ್ರೀತಂ ಜೆ. ಗೌಡ ಸಲಹೆ ನೀಡಿದರು.

      ನಗರದ ಖಾಸಗೀ ಹೋಟೆಲೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಈಗಾಗಲೇ ಶಾಸಕ ಹೆಚ್.ಪಿ. ಸ್ವರೂಪ್ ಅವರ ೩ ತಿಂಗಳ ಹನಿಮೂನ್ ಅವಧಿ ಮುಗಿದು ಹೋಗಿದ್ದು, ಇನ್ನು ಮೂರು ತಿಂಗಳಲ್ಲಿ ತಾಲೂಕಿನಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಗಮನಕೊಡಬೇಕು. ಸರಕಾರದೊಡನೆ ಸಮನ್ವಯ ಇಟ್ಟುಕೊಂಡು ಹೆಚ್ಚಿನ ಅನುಧಾನ ತರುವ ಮೂಲಕ ಕ್ಷೇತ್ರ ಅಭಿವೃದ್ಧಿಪಡಿಸಬೇಕು. ಲ್ಲಾ ಉಸ್ತುವಾರಿ ಹಾಗೂ ಸ್ಥಳೀಯ ಶಾಸಕರು ೨೫ ಗ್ರಾಮದ ಸಮಸ್ಯೆಯನ್ನು ಪರಿಹರಿಸುವುದು ಅವರ ಕರ್ತವ್ಯವಾಗಿದೆ ಎಂದು ಶಾಸಕ ಪ್ರೀತಮ್ ಗೌಡ ಹೇಳಿದರು. ನನ್ನ ಅಧಿಕಾರ ಅವಧಿಯಲ್ಲಿ ೨೫ ಗ್ರಾಮಗಳನ್ನು ನಗರಸಭೆಗೆ ಸೇರಿಸಲಾಗಿದೆ. ಪಾಲಿಕೆಯಾಗಿ ಮಾಡುವುದು ಹಾಗೂ ಈ ಗ್ರಾಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹೊಸ ಶಾಸಕರ ಕರ್ತವ್ಯವಾಗಿದೆ ಅವರ ಅಧಿಕಾರವಧಿಯ ಮೂರು ತಿಂಗಳು ಹನಿಮೂನ್ ಪಿರಿಯಡ್ ಆಗಿದ್ದು, ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಗಂಭೀರ ಚಿಂತನೆ ಮಾಡಲಿ ಎಂದರು. ಮಾಜಿ ಶಾಸಕರು ದಿವಂಗತ ಎಚ್.ಎಸ್. ಪ್ರಕಾಶ್ ಅವರು ೪ ಬಾರಿ ಶಾಸಕರಾಗಿದ್ದು, ಅವರ ಅವಧಿಯಲ್ಲಿ ಎಂದೂ ಸಹ ಕಸ ವಿಲೇವಾರಿ ಮಾಡಲು ಅಡ್ಡಿ ಉಂಟು ಮಾಡಿರಲಿಲ್ಲ. ಆದರೆ ಅವರ ಮಗ ಹೆಚ್.ಪಿ. ಸ್ವರೂಪ್ ಬೆಂಬಲಿಗರು ಕಸ ವಿಲೆವಾರಿಗೆ ಅಡ್ಡಿ ಮಾಡುತ್ತಿದ್ದಾರೆ. ಪ್ರತಿದಿನ ಸಂಘರ್ಷ ಬೇಡ ಎಂದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಗರ ಸಭೆ ಮೇಲ್ದರ್ಜೆಗೇರಿಸಿ ಪಾಲಿಕೆ ಮಾಡಲು ಶಿಫಾರಸು ಮಾಡಿದ್ದೇನೆ. ಈಗ ಕೆಲಸ ವಿಲೆಯಾಗಿದೆ ಎನ್ನುವುದಕ್ಕಿಂತ ಮುಂದೆ ಆಗಬೇಕಾಗಿರುವ ಕೆಲಸದ ಕಡೆ ಗಮನ ಹರಿಸಲಿ ಎಲ್ಲವೂ ರೆಡಿ ಮಾಡಿಟ್ಟಿದ್ದರೆ. ಅವರು ಬಂದು ಕೆಲಸವೇ ಇಲ್ಲದಂತಾಗುತ್ತದೆ. ಮುಂದುವರೆದ ಭಾಗವಾಗಿ ಬಾಕಿ ಒರುವ ಕೆಲಸವನ್ನು ಇಚ್ಛಾಶಕ್ತಿಯಿಂದ ಮಾಡಬೇಕೆಂದರು.

     ಮಾಜಿ ಸಚಿವರು ಅವರ ಅವಧಿಯಲ್ಲಿ ಮೆಡಿಕಲ್ ಕಾಲೇಜು ಮಾಡಿದರು. ನಂತರ ನನ್ನ ಅವಧಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನೂತನ ಶಾಸಕರು ಕೆಲಸ ಮಾಡಲಿ ಆಗಿರುವ ಕೆಲಸಕ್ಕೆ ಟೀಕೆ ಮಾಡಬಾರದು. ಅಭಿವೃದ್ಧಿ ಕೆಲಸ ಎಂದರೇ ಮುಂದಿನ ವಿದ್ಯಾಭ್ಯಾಸ ಹಾಗೂ ಕಾಲೇಜು ಶಿಕ್ಷಣ ಒದಗಿಸುವುದು ನೂತನ ಶಾಸಕರ ಕೆಲಸವಾಗಿದ್ದು, ಅದನ್ನು ಮಾಡಲಿ ಎಂದು ವ್ಯಂಗ್ಯವಾಡಿದರು. ಚುನಾವಣೆ ಫಲಿತಾಂಶದ ನಂತರವೂ ಹಾಲಿ ಶಾಸಕರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದೇನೆ. ನಗರಸಭೆಯನ್ನು ಪಾಲಿಕೆಯಾಗಿಸಲು ಪ್ರಯತ್ನ ಮಾಡದ್ದೇನೇ. ಪೌರಕಾರ್ಮಿಕರ ನೇಮಕ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನೆಸಿದ ಅವರು, ಟೀಕೆ ಮಾಡುವುದು ಬಿಟ್ಟು ಮುಂದಿನ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಿ ಎಂದರು. ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಕಾರ್ಯ ಚಟುವಟಿಕೆ ಮುಂದುವರೆಯಲಿದೆ ಎಂದು ಹೇಳಿದರು.

      ಲೋಕಸಭೆ ಚುನಾವಣೆಗೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಸಿದ್ದೇಶ್ ನಾಗೇಂದ್ರ, ಸಂತೋಷ್ ಕೆಂಚಾಂಬ ಸೇರಿದಂತೆ ಅನೇಕರು ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಅವರಿಗೆ ಟಿಕೆಟ್ ನೀಡುವ ವಿಚಾರ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕರು, ಹಾಸನದಲ್ಲಿ ಬಿಜೆಪಿಯಿಂದ ಕ್ಯಾಂಡಿಡೇಟ್ ಹಾಕುತ್ತೇವೆ. ಬಹುಶಃ ಜನತಾದಳದವರು ಸಪೋರ್ಟ್ ಮಾಡೋ ದಿನ ಬರಬಹುದು! ಅದು ಅವರಿಗೆ ಬಿಟ್ಟ ವಿಚಾರ ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು. ಇವತ್ತಿನ ವಾತಾವರಣದಲ್ಲಿ ಬಿಜೆಪಿ ಸ್ಪರ್ದೆ ಒಳಿತು ಅನ್ನೋದು ಕಾರ್ಯಕರ್ತರ ಭಾವನೆ. ಅವರೇನಾದ್ರೂ ಅಲೆಯನ್ಸ್ ಗೆ ಒಪ್ಪಿಕೊಂಡ್ರೆ ಬಹಶಃ ಜೆಡಿಎಸ್ ಬೇರೆ ಕಡೆ ಸೀಟ್ ಕೇಳಬಹುದು. ಹಾಸನ ಕ್ಷೇತ್ರ ಭಾರತೀಯ ಜನತಾ ಪಾರ್ಟಿಗೆ ಪೂರಕವಾಗಿರೋ ಕಾರಣಕ್ಕೆ ಬಿಟ್ಟುಕೊಡುವಂತಹ ಸಾಧ್ಯತೆ ಹೆಚ್ಚಿರುತ್ತದೆ. ಹಾಲಿ ಜೆಡಿಎಸ್ ಸಂಸದರಿರೋ ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್ ಬಿಟ್ಟುಕೊಡೋ ಸಾಧ್ಯತೆ ಇದ್ಯಾ ಎಂಬ ಪ್ರಶ್ನೆ ಬಗ್ಗೆ ಸ್ಪಷ್ಟನೆ ನೀಡಿದರು. ಪೂರಕವಾದ ವಾತಾವರಣ ಇರೋದು ಭಾರತೀಯ ಜನತಾ ಪಾರ್ಟಿಗೆ ಹಾಗಾಗಿ ಅದ್ರಲ್ಲಿ ಬದಲಾವಣೆಗೆ ಆಗಬಹುದು ಎಂಬ ಮಾಹಿತಿ ಹೇಳ್ತಿದ್ದೇನೆ. ಗೆದ್ದಿರೋ ಕ್ಷೇತ್ರ ವಾಪಸ್ಸು ಗೆಲ್ಲಬೇಕು ಅಂತೇನಿಲ್ಲ. ನಾನು ೨೦೧೮ ರಲ್ಲಿ ಗೆದ್ದಿದ್ದೆ, ೨೦೨೩ ರಲ್ಲಿ ಜನ ಬೇರೆಯವರಿಗೆ ಅವಕಾಶ ಕೊಟ್ಟಿದ್ದಾರೆ. ಅದರರ್ಥ ಯಾರು ಇರ್ತಾರೆ ಅವರಿಗೆ ಕೊಡ್ತಾರೆ ಅನ್ನೋ ರೀತಿಯಲ್ಲಿ ಆಗಲ. ನನಗೇನು ಈಗ ಜನ ಅವಕಾಶ ಕೊಟ್ಟಿಲ್ವಲ್ಲ. ಬಿಟ್ಟು ಕೊಡೋದಕ್ಕೆ ಗೆಲುವು ಮಾನದಂಡ ಆಗದಿರೋದ್ರಿಂದ. ಬಿಜೆಪಿ ನಿಂತರ ಗೆಲ್ತರೆ ಅನ್ನೋ ಅವಕಾಶ ಇದ್ದಾಗ ಒಂದೊಂದು ಸೀಟು ಮುಖ್ಯ ಆಗುತ್ತದೆ ಎಂದು ಹೇಳಿದರು.

     ಪತ್ರಿಕಾಗೋಷ್ಠಿಯಲ್ಲಿ ಹುಡಾ ಮಾಜಿ ಅಧ್ಯಕ್ಷ ಲಲಾಟ್ ಮೂರ್ತಿ, ನಗರಸಭೆ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ಪಕ್ಷದ ನಗರ ಮಂಡಲದ ಅಧ್ಯಕ್ಷ ವೇಣುಗೋಪಾಲ್ ಇತರರು ಉಪಸ್ಥಿತರಿದ್ದರು.

 

;;;;

Post a Comment

0 Comments