ಹಾಸನ ನಗರಸಭೆ ವ್ಯಾಪ್ತಿಗೆ 25 ಗ್ರಾಮ

ಹಾಸನ:  ಹಾಸನ  ನಗರಸಭೆ ವ್ಯಾಪ್ತಿಗೆ ಇನ್ನೂ 25 ಗ್ರಾಮಗಳನ್ನ ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ದೊರಕಿದೆ. 
 ಸಚಿವ ಡಾ.ನಾರಾಯಣ ಗೌಡ  ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ವಿಷಯವನ್ನು ಸಂಪುಟದ ಮುಂದೆ ಇಟ್ಟು ಅನುಮೋದನೆ ಪಡೆದುಕೊಂಡಿದ್ದಾರೆ. 
1995 ರಲ್ಲಿ ಘೋಷಣೆಯಾದ ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ 1.56 ಲಕ್ಷ ಜನಸಂಖ್ಯೆ ಇದೆ. ಈಗ ಇನ್ನೂ 25 ಗ್ರಾಮಗಳನ್ನ ಸೇರ್ಪಡೆ ಮಾಡುವುದರಿಂದ 2.26 ಲಕ್ಷ ಜನಸಂಖ್ಯೆ ಆಗಲಿದೆ. 
 ಈ ಹಿನ್ನೆಲೆಯಲ್ಲಿ 25 ಗ್ರಾಮಗಳನ್ನ ನಗರಸಭೆ ವ್ಯಾಪ್ತಿಗೆ ಸೇರಿಸಲು ಸಚಿವರು ನಡೆಸಿದ ಪ್ರಯತ್ನ ಸಫಲವಾಗಿದೆ. ಸತ್ಯಮಂಗಲ, ಹರಳಹಳ್ಳಿ, ತೇಜೂರು, ಟಿ.ಕಾಟಿಹಳ್ಳಿ, ಭೂವನಹಳ್ಳಿ ಮಣಚನಹಳ್ಳಿ, ಕಂದಲಿ, ತಟ್ಟೆಕೆರೆ ಹಾಗೂ ಹನುಂತಪುರ ಗ್ರಾಮ ಪಂಚಾಯತಿಯಗಳ ಒಟ್ಟು 25 ಗ್ರಾಮಗಳನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ.

Post a Comment

0 Comments