ಸಿಂಘಂ FILM ರೀತಿಯಲ್ಲಿ ಬುದ್ದಿ ಕಲಿಸಿದ ಪೋಲೀಸರು...!?


ಸುಮ್ ಸುಮ್ಮನೆ ಸಣ್ಣ ಸಣ್ಣ ವಿಚಾರಗಳಿಗೆ ಸಂಘಟನೆ ಹೆಸರಲ್ಲಿ,  ಗುಂಪು ಕಟ್ಟಿಕೊಂಡು ಪೋಲೀಸ್ ಠಾಣೆ ಎದುರು ಏಕಾ ಏಕಿ ಪ್ರತಿಭಟನೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ ಅರಕಲಗೂಡು PSI ವಿಜಯ್ ಕೃಷ್ಣ...!?

ಅರಕಲಗೂಡು : ಪಟ್ಟಣದ ಪೋಲಿಸ್ ಠಾಣೆ ಎದುರು ಏಕ ಏಕಿ ಧರಣಿಗೆ ಮುಂದಾಗಿ ಪೋಲೀಸರ ಮೇಲೆ  ಕಿಡಿಕಾರಿದ ಓರ್ವ ಮುಖಂಡನ್ನು  ಕಸ್ಟಡಿಗೆ ತೆಗೆದು ಕೊಂಡ ಸಬ್ ಇನ್ ಪೆಕ್ಟರ್ ವಿಜಯಕೃಷ್ಣ .

ಪಟ್ಟಣದ 2 ನೇ ವಾರ್ಡನ ಮಂಡಿಕೆರಿ ಗ್ರಾಮ ದೇವಸ್ಥಾನ ನಿವೇಶನವನ್ನು ಒತ್ತುವರಿ ಮಾಡಲಾಗಿದೆ ಎಂದು ಗ್ರಾಮಸ್ಥರು ಸಂಜೆ 7:30 ಕ್ಕೆ ದೇವಾಲಯದ ನಿವೇಶನಾದ ಸುತ್ತಲೂ ಬೇಲಿ ನಿರ್ಮಾಣಕ್ಕೆ ಮುಂದಾದರು ಇದಕ್ಕೆ ಒಪ್ಪಂದ ಗ್ರಾಮದ ಪುಟ್ಟಲಕ್ಷ್ಮಿ  ಎಂಬವರು ನಿವೇಶನ ನಮ್ಮಗೆ ಸೇರಿದ್ದು ಎಂದು  ತಗ್ಗಾದೆ ತೆಗೆದು ಆರ್ಮಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಗನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಳು.   ಯೋಧ ತಾಯಿ ಮಾತು ಕೇಳಿ  ಅಲ್ಲಿಂದಲೇ ಆರಕ್ಷಕ ಠಾಣೆಗೆ ದೂರವಾಣಿ ಮೂಲಕ ಕರೆ ಮಾಡಿ ತಾಯಿ ಹಾಗೂ ತಂಗಿಗೆ ರಕ್ಷಣೆ ಕೋರಿದರು .
  ದೂರಿನ ಅನ್ವಯ  ಗ್ರಾಮಕ್ಕೆ ತೆರಳಿದ ಪೋಲಿಸ್ ಸಿಬ್ಬಂದಿಗೆ ಗುಂಪು ಗುಂಪಾಗಿ ನಿಂತ  ಗ್ರಾಮಸ್ಥರು   ಪೋಲಿಸ್ ರ ಜೊತೆ ಮಾತಿನ ಚಕ್ಕಮಕ್ಕಿ ನಡೆಸಿದರು ನಂತರ ಆರಕ್ಷಕ ಸಿಬ್ಬಂದಿ ಗುಂಪು ಚದಿರಿಸಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಓರ್ವ ಮಹಿಳೆ ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲುಗೊಂಡಳು  ಇದನ್ನು ಪ್ರಶ್ನೆಸಲು ಗ್ರಾಮಸ್ಥರು ಇಂದು ಪೋಲಿಸ್ ಠಾಣೆಗೆ ಮಹಿಳೆಯರ ಸಮೇತವಾಗಿ ದಾವಿಸಿದರು  ಇದರ ಯಾವುದೇ ಅರಿವು ಇಲ್ಲದ ಕೇಲವು  ಮುಖಂಡರು ಗ್ರಾಮಸ್ಥರ  ಜೊತೆಗೂಡಿ  ಪ್ರತಿಭಟನೆ ನೇತೃತ್ವವಹಿಸಿ ಏಕ ಏಕಿ ಧರಣಿ ಸತ್ಯಾಗ್ರಹ ನೆಡಸಲು ತೀರ್ಮಾನ ಕೈಗೊಂಡರು ನಂತರ ಠಾಣೆ ಎದುರು ಕುಳಿತು  ಪೊಲೀಸ್ ಅಧಿಕಾರಿ ವಿರುದ್ಧ ದಿಕ್ಕರ ಕೂಗಿ ಧರಣಿ ನೆಡಸಲು ಪ್ರಾರಂಭಿಸಿದರು. ಇದನ್ನು ಕಂಡು ಕುಪಿತಗೊಂಡ  ಸಬ್ ಇನ್ ಪೆಕ್ಟರ್ ವಿಜಯಕೃಷ್ಣ ಮುಖಂಡರಾದ ಚಂದ್ರ ಮತ್ತು ಸಣ್ಣಸ್ವಾಮಿ  ಮೇಲೆ ರೇಗಾಡಿ ನೀವು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ದುರುದೇಶದಿಂದ ಎನು ಅರಿಯದ ಅಮಾಯಕರ  ಜೊತೆ ಧರಣಿ ಪ್ರತಿಭಟನೆ ನಡೆಸುತ್ತಿದ್ದೀರ. ಏನಾದರೂ ಸಮಸ್ಯೆ ಇದರೆ ಠಾಣೆಗೆ ದೂರು ನೀಡಿ ಮೊದಲು. ತದನಂತರ ನಿಮ್ಮ  ಸಮಸ್ಯೆ ಸ್ಪಂದಿಸಿಲಿಲ್ಲ ಎಂದರೇ  ಧರಣಿ ಸತ್ಯಗಾರ ನೆಡಸಿ ಎಂದು ಅಕ್ರೋಶ ವ್ಯಕ್ತಪಡಿಸಿದರು. ನಂತರ ಪೋಲೀಸರ ಜೊತೆಗೆ ಮಾತಿನ ಚಕಮಕಿಗೆ ಇಳಿದ ಮುಖಂಡ ಚಂದ್ರನನ್ನು ಕಸ್ಟಡಿಗೆ ತೆಗೆದು ಕೊಂಡರು. ನಂತರ ಗ್ರಾಮದ ಹಿರಿಯ ಜೊತೆ ಮಾತುಕತೆ ನಡೆಸಿ ದೇವಸ್ಥಾನದ ತಗಾದೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದರು.

Post a Comment

0 Comments