ಬೆಂಗಳೂರು-ಹಾಸನ ಹೆದ್ದಾರಿ ಟೋಲ್ ಹೆಚ್ಚಳ
ಹಾಸನ: ಬೆಂಗಳೂರು- ಹಾಸನ ನಡುವೆ ಸಂಚಾರ ನಡೆಸುವ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೋಲ್ ಶುಲ್ಕ ಹೆಚ್ಚಳ ಮಾಡಲು ಅನುಮತಿ ನೀಡಿದೆ.
ಸೆಪ್ಟೆಂಬರ್ 1ರಿಂದ ಹೊಸ ಶುಲ್ಕ ಜಾರಿಗೆ ಬರಲಿದೆ.
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಹಾಸನ ನಡುವೆ ಸಂಪರ್ಕ ಕಲ್ಪಿಸುತ್ತದೆ. ಟೋಲ್ ಶುಲ್ಕ ಹೆಚ್ಚಳ ಮಾಡಲು ಎನ್ಎಚ್ಎಐ ಅನುಮತಿ ನೀಡಿದೆ. ಈ ಮಾರ್ಗದಲ್ಲಿ ಒಟ್ಟು ಮೂರು ಟೋಲ್ ಪ್ಲಾಜಾಗಳಿವೆ.
ಕಾರುಗಳಲ್ಲಿ ಎರಡೂ ಕಡೆ ಸಂಚಾರ ನಡೆಸುವವರು 5 ರೂ. ಶುಲ್ಕವನ್ನು ಹೆಚ್ಚು ಪಾವತಿ ಮಾಡಬೇಕು. ಮಾಸಿಕ ಪಾಸುಗಳ ದರಗಳನ್ನು 20 ರೂ. ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್ 1ರಿಂದ ನೂತನ ದರಪಟ್ಟಿ ಜಾರಿಯಾಗಲಿದೆ.
ಎಲ್ಸಿವಿ ವಾಹನಗಳ ಮಾಸಿಕ ಪಾಸಿನ ದರವನ್ನು 40 ರೂ. ಏರಿಕೆ ಮಾಡಲಾಗಿದೆ. ಬಸ್, ಲಾರಿ 5 ರೂ. ಶುಲ್ಕವನ್ನು ಹೆಚ್ಚು ನೀಡಬೇಕಿದೆ. ಮಾಸಿಕ ಪಾಸುಗಳ ದರ 4725 ರಿಂದ 4800ಕ್ಕೆ ಏರಿಕೆಯಾಗಿದೆ.
ಕಾರುಗಳ ಏಕ ಮುಖ ಸಂಚಾರಕ್ಕೆ ಇದ್ದ ದರವನ್ನು ಹೆಚ್ಚಳ ಮಾಡಿಲ್ಲ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕೆಲವು ವಾಹನಗಳ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
0 Comments