ಖಾಕಿ ಹೆಸರಲ್ಲಿ ಕಳ್ಳತನ 75 ಸಾವಿರ ಮೌಲ್ಯದ ಚಿನ್ನಾಭರಣಕ್ಕೆ ಕನ್ನ

ಖಾಕಿ ಹೆಸರಲ್ಲಿ ಕಳ್ಳತನ  75 ಸಾವಿರ ಮೌಲ್ಯದ ಚಿನ್ನಾಭರಣಕ್ಕೆ ಕನ್ನ

ಚನ್ನರಾಯಪಟ್ಟಣ: ಪೊಲೀಸರೆಂದು ಹೇಳಿಕೊಂಡು ಮನೆಗೆ ನುಗ್ಗಿ 
75 ಸಾವಿರ ಬೆಲೆಯ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಜಿ.ಹೊಸೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಆಗಸ್ಟ್ 17 ರ ರಾತ್ರಿ 9.15 ರ ಸುಮಾರಿಗೆ ಗ್ರಾಮದ ಲಾವಣ್ಣಗೌಡ, ಎಂಬುವರು ಮನೆಯಲ್ಲಿದ್ದಾಗ ಇನ್ನೋವಾ ಕಾರೊಂದು ಬಂದಿದೆ.
ಮನೆಯ ಮುಂದೆ ಕಾರಿನ ಶಬ್ದವಾಗುತ್ತಿದ್ದಂತೆಯೇ ಲಾವಣ್ಣಗೌಡ ಬಾಗಿಲು ತೆಗೆದು ಹೊರ ಬಂದಿದ್ದಾರೆ.
ಮನೆಯ ಮುಂದೆ ಕಾರು ನಿಲ್ಲಿಸಿ ಬಾಗಿಲಿಗೆ ಬಂದ ನಾಲ್ವರು, ನಾವು ಪೊಲೀಸರು, ಬೆಂಗಳೂರಿನಿಂದ ಬಂದಿದ್ದೇವೆ.ನಿಮ್ಮ ತಮ್ಮ ಬೆಂಗಳೂರಿನಿಂದ ಹಣ ಕಳವು ಮಾಡಿಕೊಂಡು ಬಂದಿದ್ದಾನೆ.ಆ ಹಣವನ್ನು ಎಲ್ಲಿ ಇಟ್ಟಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡಿ ಮನೆಯ ಎಲ್ಲಾ ಕಡೆ ಸರ್ಚ್ ಮಾಡಿದ್ದಾರೆ.
ಇದನ್ನು ನಿರಾಕರಿಸಿದ ಲಾವಣ್ಣಗೌಡ, ನಾಲ್ಕು ಮಂದಿಗೆ ತಮ್ಮ ಸಹೋದರನ ಫೋಟೋ ತೋರಿಸಿ ಆತ ಬೆಂಗಳೂರಿನಲ್ಲಿಲ್ಲ. ಚಾಮರಾಜನಗರಲ್ಲಿ ಇದ್ದಾನೆ ಎಂದು ಅರಿಕೆ ಮಾಡಿದ್ದಾರೆ. ಆದರೆ ನಾಲ್ವರು ಬಂದ ಉದ್ದೇಶವೇ ಬೇರೆಯಾಗಿದ್ದರಿಂದ ಯಾವುದನ್ನೂ ಕೇಳಿಸಿಕೊಳ್ಳದ ನಕಲಿ ಪೊಲೀಸರು, ಲಾವಣ್ಣಗೌಡ ಅವರ ತಂದೆ ತಾಯಿಯನ್ನು ಮನೆಯ ಹಾಲ್ ನಲ್ಲಿ ಇಡೀ ಮನೆಯನ್ನು ತಡಕಾಡಿದ್ದಾರೆ. ನಂತರ ಬೀರುವಿನ ಬಾಗಿಲ ಬೀಗ ಮುರಿದು ಸುಮಾರು 75 ಸಾವಿರ ಬೆಲೆಯ 12 ಗ್ರಾಂ ತೂಕದ ಚಿನ್ನದ ಸರ, 8 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ, 5 ಗ್ರಾಂ ತೂಕದ ಚಿನ್ನದ ಉಂಗುರ ದೋಚಿ ಪರಾರಿಯಾಗಿದ್ದಾರೆ.
ಪೊಲೀಸರ ಸೋಗಿನಲ್ಲಿ ಬಂದವರು, ತಾವು ಬಂದ ಉದ್ದೇಶ ಈಡೇರಿದ ನಂತರ ಬೆಳಗ್ಗೆ ನೀವೆಲ್ಲಾ ಬೆಳಗ್ಗೆ ಚನ್ನರಾಯಪಟ್ಟಣ ಪೆÇಲೀಸ್ ಠಾಣೆಗೆ ಬನ್ನಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ಲಾವಣ್ಣಗೌಡ ತಮ್ಮ ಲಕ್ಷ್ಮಣ್ಣಗೌಡ ಬಂದ ನಂತರ ಅಸಲೀ ವಿಷಯ ಬಯಲಾಗಿದೆ. ಈ ಸಂಬಂಧ
ಚನ್ನರಾಯಪಟ್ಟಣ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments