ಇಂದು ಇಬ್ಬರು ಕೊರೋನಾ ಸೋಂಕಿತರು ಸಾವು, 144ಕೋವಿಡ್ ಪೀಡಿತರು ಪತ್ತೆ: ಡಿಹೆಚ್ ಓ ಡಾ ಸತೀಶ್ ಕುಮಾರ್
ಹಾಸನ ಜಿಲ್ಲೆಯಲ್ಲಿ ದಿನೆ ದಿನೆ ನೂರಾರು ಪ್ರಕರಣ ದಾಖಲಾಗುತ್ತಿದ್ದು, ಶನಿವಾರದಂದು ಒಂದೆ ದಿವಸ ೧೪೪ ಪಾಸಿಟಿವ್ ಪತ್ತೆಯಾಗಿದ್ದು, ಮತ್ತೆರಡು ಸಾವು ಸೇರಿ ಇದುವರೆಗೂ ೬೩ ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಶುಕ್ರವಾರ ದಾಖಲಾಗಿರುವ ಕೊರೋನಾ ಪ್ರಕರಣದಲ್ಲಿ ಆಲೂರು-೨, ಬೇಲೂರು-೧೫, ಹಾಸನ-೯೪, ಅರಸೀಕೆರೆ-೯, ಚನ್ನರಾಯಪಟ್ಟಣ-೮, ಅರಕಲಗೂಡು-೧, ಹೊಳೆನರಸೀಪುರ-೧೧, ಸಕಲೇಶಪುರ-೨ ಸೇರಿ ಒಂದೆ ದಿವಸದಲ್ಲಿ ೧೪೪ ಪಾಸಿಟಿವ್ ಕೇಸನ್ನು ದಾಖಲು ಮಾಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು ೨೨೭೫ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ೧೦೨೨ ಮಂದಿ ಗುಣಮುಖರಾಗಿ ವಾಪಸ್ ಮನೆಗೆ ಹೋಗಿದ್ದರೇ, ೧೧೯೦ ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಶನಿವಾರ ಎರಡು ಜನರು ಮೃತಪಟ್ಟಿದ್ದು, ಕೊರೊನಾದಿಂದ ಇದುವರೆಗೂ ೬೩ ಜನರ ಸಾವು ಸಂಭವಿಸಿದೆ.
ಕೊರೋನಾ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು.
#DHO Dr Sathishkumar #fightagainstcoronavirus #Hassan
0 Comments