ಸಕಲೇಶಪುರ 30 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭ
ಸಕಲೇಶಪುರ : ತಾಲ್ಲೂಕಿನ ಕೋವಿಡ್ 19 ಸೋಂಕಿತರ ಆರೈಕೆಗಾಗಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 30 ಹಾಸಿಗೆ ಹೊಂದಿರುವ ಸುಸಜ್ಜಿತವಾದ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ.
ಆರೈಕೆ ಕೇಂದ್ರದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ತಾಲ್ಲೂಕು ವೈದ್ಯಾಧಿಕಾರಿ ಮಹೇಶ್, ತಾಲೂಕು ಕಾಫರ್ಡ್ ಆಸ್ಪತ್ರೆಯ ಸಹಯೋಗ ಹಾಗೂ ಉಪ ವಿಭಾಗ ಅಧಿಕಾರಿಗಳು ಮತ್ತು ತಹಸೀಲ್ದಾರ್ ರವರ ಮಾರ್ಗದರ್ಶನದಲ್ಲಿ ಕೋವಿಡ್ ಸೆಂಟರ್ ಅನ್ನು ಈಗ ಕೋವಿಡ್ ಆರೈಕೆ ಕೇಂದ್ರವಾಗಿ ಮಾರ್ಪಡಿಸಲಾಗಿದೆ.
ಈ ಕೇಂದ್ರದಲ್ಲಿ ಒಟ್ಟು 30 ಹಾಸಿಗೆಗಳಿದ್ದು ಇದರಲ್ಲಿ ಲಕ್ಷಣ ರಹಿತ ಅಥವಾ ಅಲ್ಪ ಲಕ್ಷಣ ಹೊಂದಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು. ಈ ಕೇಂದ್ರದಲ್ಲಿ ಒಬ್ಬರು ವೈದ್ಯರು ಶುಶ್ರುಕಿಯರು ಯರು ಹಾಗೂ ಗ್ರೂಪ್ ಡಿ ದರ್ಜೆ ನೌಕರರ ತಂಡವನ್ನು ರಚನೆ ಮಾಡಿ ಮೂರು ಪಾಳಿಯಲ್ಲೂ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಸೋಕಿತರ ಊಟ ಉಪಚಾರಕ್ಕೆ ತಹಸೀಲ್ದಾರ್ ರವರ ಮಾರ್ಗದರ್ಶನ ಹಾಗೂ ಪುರಸಭಾ ಮುಖ್ಯ ಅಧಿಕಾರಿಗಳು ಸರ್ಕಾರದ ಸುತ್ತೋಲೆಯಲ್ಲಿರುವಂತೆ ದಿನನಿತ್ಯ ಮೆನು ಚಾರ್ಟ್ ನಲ್ಲಿರುನಂತೆ ನೋಡಿಕೊಂಡು ಉಪಚಾರಿಸಲಾಗುವುದು ಮಾಡಲಾಗುವುದು.
ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಇಲ್ಲದಿದ್ದರೂ ಕೂಡ ಅಂತವರಿಗೆ ಇಲ್ಲಿ 14 ದಿನಗಳವರೆಗೆ ಔಷದೋಪಚಾರ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ನಂತರ 10 ದಿನಗಳಲ್ಲಿ ಪುನ್ಹ ಯಾವುದೇ ಲಕ್ಷಣ ಕಂಡು ಬಾರದೆ ಇದ್ದಲ್ಲಿ ಅವರನ್ನು ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಸದ್ಯ ನೂತನ ಹಾರೈಕೆ ಕೇಂದ್ರಕ್ಕೆ ಇಂದು ಇಬ್ಬರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಹಿಂದೆ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದಿದ್ದರಿಂದ ನಾವು ಹಾಸನ ಹಾಗೂ ಆಲೂರು ಆಸ್ಪತ್ರೆಗಳಿಗೆ ಸೋಂಕಿತರನ್ನು ಕಳುಹಿಸಿ ಕೊಡುತ್ತಿದ್ದೆವು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸದ್ಯ ತಾಲೂಕು ಆಸ್ಪತ್ರೆಯ ಜ್ವರ ತಪಾಸಣಾ ಕೇಂದ್ರದಲ್ಲಿ ತಪಾಸಣೆ ನಡೆಸಿ ಶಂಕಿತರು ಕಂಡುಬಂದರೆ ಅಂತವರನ್ನು ಈ ಕೇಂದ್ರಕ್ಕೆ ದಾಖಲು ಮಾಡಿಕೊಂಡು ಆರೈಕೆ ಮಾಡಲಾಗುವುದು. ಈ ಹಿಂದೆ ಈ ಕೇಂದ್ರವನ್ನು ಕೊರೋನಾ ವೈರಸ್ ನಾ ಪ್ರಾಥಮಿಕ ಸಂಪರ್ಕದಲ್ಲಿದವರಿಗೆ ಕೋವಿಡ್ ಸೆಂಟರ್ ಆಗಿತ್ತು ಈಗ ಅದನ್ನೇ ಆರೈಕೆ ಕೇಂದ್ರವನ್ನಾಗಿ ಮಾರ್ಪಾಡು ಮಾಡಿದ್ದೇವೆ ಎಂದರು.ತಾಲ್ಲೂಕಿನಲ್ಲಿ ಒಟ್ಟು 60 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲು ಚಿಂತನೆ ನಡೆಸಿದ್ದೇವೆ ಈಗಾಗಲೇ 30 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಿದ್ದೇವೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಪಕ್ಕದಲ್ಲೇ ಇರುವ ಮತ್ತೊಂದು ಹಾಸ್ಟೆಲ್ನಲ್ಲಿ 30 ಹಾಸಿಗೆಯ ಕೇಂದ್ರವನ್ನು ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.
ಸೋಂಕಿತರಿಗೆ ಚಿಕಿತ್ಸೆ ನೀಡುವ ಕೊರೋನಾ ವಾರಿಯರ್ಸ್ ಗಳು ಹೊರಗಡೆ ಓಡದಂತೆ ಅವರಿಗಾಗಿ ಪ್ರತ್ಯೇಕವಾದ ಕೊಠಡಿಯನ್ನು ಮೀಸಲಿರಿಸಿ 24 ಗಂಟೆಯೂ ತುರ್ತು ಸೇವೆಗೆ ಅಂಬುಲೆನ್ಸ್ ಅನ್ನು ನಿಯೋಜನೆ ಮಾಡಲಾಗಿದೆ.ಸೋಂಕಿತರಲ್ಲಿ ಯಾರಿಗದರು ತುರ್ತಾಗಿ ಚಿಕಿತ್ಸೆ ಬೇಕಾದಲ್ಲಿ ಅವರನ್ನು ಹಾಸನದ ಹಿಮ್ಸ್ ಕಳುಹಿಸಿ ಕೊಡಲಾಗುವುದು.
ಇನ್ನೂ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಆರೋಗ್ಯ ಅಧಿಕಾರಿ, ಶಿಕ್ಷಣ ಅಧಿಕಾರಿಗಳು ಹಾಗೂ ಆಪ್ತ ಸಮಾಲೋಚನಾ ಅಧಿಕಾರಿಗಳು ದಿನನಿತ್ಯ ಈ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಇಂದಿನ ಕೋವಿಡ್ -19 ಸ್ಥಿತಿಗತಿ. :- ಇಂದು ಹೊಸದಾಗಿ ನಗರ ಪ್ರದೇಶದ ಕಸಬಾ ಹೋಬಳಿಯಲ್ಲಿ 05 ಕೋವಿಡ್ ಪ್ರಕರಣಗಳು ಕಂಡುಬಂದಿದ್ದು. ಬೆಳಗೋಡು ಹೋಬಳಿಯ ಸೋಂಕಿತರು ಒಬ್ಬರು ಮೃತಪಟ್ಟಿದ್ದಾರೆ.ಇದುವರೆಗೂ ತಾಲ್ಲೂಕಿನಲ್ಲಿ 82 ಕೋವಿಡ್ ಪ್ರಕರಣ ಕಂಡು ಬಂದಿದ್ದು 35 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 44 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಒಟ್ಟು ಕೋವಿಡ್ ಗೆ ತಾಲೂಕಿನಲ್ಲಿ ಮೂವರು ಬಲಿಯಾಗಿದ್ದಾರೆ.
0 Comments