ಅರಕಲಗೂಡು : ಪಟ್ಟಣದಲ್ಲಿ ಬೀದಿ ನಾಯಿಗಳ ಹಿಂಡು ಹೆಚ್ಚುತ್ತಿದ್ದು ನಾಗರೀಕರು ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗೀದೇ

ಅರಕಲಗೂಡು : ಪಟ್ಟಣದಲ್ಲಿ ಬೀದಿ ನಾಯಿಗಳ ಹಿಂಡು ಹೆಚ್ಚುತ್ತಿದ್ದು ನಾಗರೀಕರು ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದ್ದು ತಕ್ಷಣವೇ ಪಟ್ಟಣ ಪಂಚಾಯತಿ ಆಡಳಿತ ವರ್ಗ ಎಚ್ಚೆತ್ತು ನಾಯಿಗಳ ಉಪಟಳವನ್ನು ನಿಯಂತ್ರಣ ಮಾಡಬೇಕು ಎಂದು ಪಟ್ಟಣ ಪಂಚಾಯತಿ ಉಪಾಧ್ಯಕ್ಷ ನಿಖಿಲ್ ಕುಮಾರ್ ಅಗ್ರಹಿಸಿದ್ದಾರೆ.
ಪಟ್ಟಣದ ೧೭ ವಾರ್ಡ್ ಗಳಲ್ಲಿಯೂ ಬೀದಿ ನಾಯಿಗಳ ಸಂಖ್ಯೆ ದಿನ ದಿನೇ ಹೆಚ್ಚುತ್ತಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ ಸ್ಥಳೀಯರು ತಮ್ಮ ದಿನನಿತ್ಯದ ಕೆಲಸ ಕಾರ್ಯಕ್ಕೆ ತೆರಳಲು ರಸ್ತೆಗೆ ಬಂದರೆ ಬೀದಿ ನಾಯಿಗಳು ಕಾಟದಿಂದ ತಪ್ಪಿಸಿಕೊಂಡು ಹೋಗುವುದೆ ಸಾಹಸಮಯವಾಗಿದೆ ಹಲವಾರು ತಿಂಗಳಿಂದ ನಾಗರೀಕರು ಮೌಖಿಕವಾಗಿ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಸಮಸ್ಯೆ ಬಗ್ಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಜಾಲ ತಾಣ ವಿಷಯ ಪ್ರಸ್ತಾಪಿಸಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಅಗ್ರಹಿಸಿದರು ನಾಗರೀಕರ ಕೂಗಿಗೆ ಸ್ಪಂದಿಸದೆ ಕಿವುಡು ತನ್ನ ಪ್ರದರ್ಶನ ಮಾಡುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ

Post a Comment

0 Comments