ರಾಜ್ಯದಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಿದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ

ಹಾಸನ: ಜಿಲ್ಲಾಧಿಕಾರಿಗಳು ಕೂಡಲೇ 
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಸಭೆ 
ಕರೆದು ಸೂಚನೆ ಕೊಡಬೇಕು. ಇಲ್ಲವಾದರೇ 
ನಾನೇ ಚಾರ್ಜ್ ತೆಗೆದುಕೊಂಡು ಖಾಸಗಿ 
ಆಸ್ಪತ್ರೆಗೆ ಬೀಗ ಹಾಕಿಸುವ ಕೆಲಸ 
ಮಾಡಲಾಗುವುದು ಎಂದು ರೋಗಿಗಳಿಂದ 
ಹೆಚ್ಚಿನ ಹಣ ವಸೂಲಿ ಮಾಡುವ ಆಸ್ಪತ್ರೆ 
ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ 
ಆಕ್ರೋಶವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ 
ಸುದ್ದಿಗಾರರೊಂದಿಗೆ ಮಾತನಾಡಿದ 
ಅವರು, ಹಾಸನ ಜಲ್ಲೆಯಲ್ಲಿ ಆಡಳಿತ 
ಇದಿಯೋ ಇಲ್ಲವೋ ಗೊತ್ತಿಲ್ಲ! 
ಜಿಲ್ಲಾಧಿಕಾರಿಗಳು ಪ್ರಮಾಣಿಕರಾಗಿದ್ದರೂ 
ಈ ರೀತಿ ಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 
ಕೊರೋನಾ ಇಲ್ಲವೇ ಯಾವುದೇ 
ಖಾಯಿಲೆಗೆ ರೋಗಿ ಹೋದರೇ 10 ರಿಂದ 
15 ಲಕ್ಷದವರೆಗೂ ಬಿಲ್ ಮಾಡುತ್ತಿದ್ದಾರೆ. 
ಈ ಬಗ್ಗೆ ಯಾವ ಅಧಿಕಾರಿಗಳು ಕೇಳುಲವರೆ 
ಇಲ್ಲ. ಇನ್ನು ಬಿ.ಎಂ. ರಸ್ತೆ ಬಳಿ ಇರುವ 
ಸ್ಪರ್ಶಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೆಚ್ಚಿನ 
ಬಿಲ್ ಮಾಡಿ ಹಣ ಪಡೆಯುತ್ತಿರುವ ಬಗ್ಗೆ 
ನನ್ನ ಗಮನಕ್ಕೂ ಬಂದಿದೆ ಎಂದು ದೂ-
ರಿದ ಅವರು, ತಕ್ಷಣದಲ್ಲಿ ಎಲ್ಲಾ ಖಾಸಗಿ 
ಆಸ್ಪತ್ರೆಯವರನ್ನು ಕರೆದು ಜಿಲ್ಲಾಧಿಕಾ-
ರಿಯವರು ಸಭೆ ಮಾಡಿ ಸೂಚನೆ 
ಕೊಡಬೇಕು ಇಲ್ಲವಾದರೇ ನಾವುಗಳು 
ಎಲ್ಲಾರು ಸೇರಿ ಖಾಸಗಿ ಆಸ್ಪತ್ರೆಯ 
ಬಾಗಿಲು ಹಾಕಿಸುವ ಕಾರ್ಯಕ್ರಮ 
ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚ-
ರಿಸಿದರು. ಕಂಚಮಾರನಹಳ್ಳಿಯ ಮಹಿಳೆ 
ಓರ್ವಳು ಖಾಸಗಿ ಆಸ್ಪತ್ರೆಯೊಂದರಲ್ಲಿ 
ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದರೂ 
10 ಲಕ್ಷ ಬಿಲ್ ಮಾಡಿದ್ದಾರೆ. ಜೈನ 
ಸಮಾಜದ ಓರ್ವರಿಗೆ 16 ಲಕ್ಷ ರೂ ಬಿಲ್ 
ಮಾಡಲಾಗಿದೆ. ಒಂದು ಬೆಡ್ಡಿಗೆ ದಿನಕ್ಕೆ 16 
ಸಾವಿರ ಬಿಲ್ ವಿಧಿಸಲಾಗುತ್ತಿದೆ. ಇಂತಹ 
ಕೆಟ್ಟ ಪರಿಸ್ಥಿತಿಯನ್ನು ನಾನು ಎಂದು 
ನೋಡಿಲ್ಲ ಎಂದು ಆತಂಕವ್ಯಕ್ತಪಡಿಸಿದರು. 
ಡಿಸಿಯವರು ಖಾಸಗಿ ಆಸ್ಪತ್ರೆಯ ಸಭೆ 
ಕರೆಯದಿದ್ದರೇ ಜಿಲ್ಲಾಧಿಕಾರಿ ಮೇಲೆ 
ನಾನೇ ಚಾರ್ಜ್ ತೆಗೆದುಕೊಳ್ಳುತ್ತೇನೆ. 
ಜೊತೆಗೆ ಆಸ್ಪತ್ರೆಗಳ ಬಾಗಿಲು ಹಾಕಿಸಿ ಕ್ರಮ 
ತೆಗೆದುಕೊಳ್ಳುವುದಾಗಿ ತಿಳಿಸಿದರು.
ಸಹಕಾರ ಸಂಘಗಳ ನಿಭಂದಕ 
ಸುನೀಲ್ ಎಂಬುವನು ಮತದಾರ 
ಪಟ್ಟಿಯಿಂದ ಅನೇಕರ ಹೆಸರು ತೆಗೆದು 
ಹಾಕಿದ್ದಾನೆ. ಇತನು ಚಿಕ್ಕಮಗಳೂರು, 
ಸಂಜೀವಿನಿ ಆಸ್ಪತ್ರೆ, ಜನತಾ ಬಜಾರ್, 
ಸಕಲೇಶಪುರ ಉಪನಿಭಂದಕ ಮತ್ತು 
ಡಿಸಿಸಿ ಬ್ಯಾಂಕ್ ಗೂ ಈತ ಒಬ್ಬನೇ 
ಉಪನಿಭಂದಕನಾಗಿದ್ದಾನೆ. ಇನ್ನು ಹೆಂಡತಿ 
ಲೋಕಾಯುಕ್ತ ವೃತ್ತ ಇನ್ಸ್ ಪೆಕ್ಟರ್ 
ಎಂದು ಹೇಳಿಕೊಂಡು ಯಾವ ಆಸ್ಪತ್ರೆಗೂ 
ಹೋದರೂ ದುಡ್ಡೆ ಕೊಡುವುದಿಲ್ಲ. 
ಎಸ್ಪಿ ಗಮನಕ್ಕೂ ತರಲಾಗಿದೆ. ಈ ಎಲ್ಲಾ 
ಇಲಾಖೆಗಳಿಗೆ ಈತ ಒಬ್ಬನೇ ಉಸ್ತುವಾರಿ 
ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ 
ತಿಳಿಸಿರುವುದಾಗಿ ಹೇಳಿದರು. ಸಂಜೀವಿನಿ 
ಸಹಕಾರಿ ಆಸ್ಪತ್ರೆಯಲ್ಲಿ ಏನು ಪೋರ್ಜರಿ 
ನಡೆದಿದೆ ಈ ಬಗ್ಗೆ ಡಿ.ಆರ್. ಅಧಿಕಾ-
ರಿಗಳ ಗಮನಕ್ಕೂ ತಂದಿದ್ದು, ಕೂಡಲೇ 
ತನಿಖೆ ಮಾಡಿ ಇಂತವರ ಮೇಲೆ 
ಕ್ರಮ ಜರುಗಿಸಬೇಕು. ಒಂದು ಕಡೆ 
ಕೊರೋನಾದಿಂದ ಜನ ಸಾಯುತ್ತಿದ್ದರೇ 
ಇನ್ನೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ 
ರೋಗಿಗಳಿಂದ ಹಣ ವಸೂಲಿ 
ಮಾಡಲಾಗುತ್ತಿದೆ ಎಂದು ಆರೋಪಿಸಿದರು

Post a Comment

0 Comments