ಒಮಿನಿ ವಾಹನದಲ್ಲಿ ಸಾಗಿಸುತ್ತಿದ್ದ 300 ಗ್ರಾಂ ಗಾಂಜಾವನ್ನು ಜಿಲ್ಲಾ ವಿಚಕ್ಷಣ ದಳ ವಶಪಡಿಸಿಕೊಂಡಿದೆ.

ಮಾರುತಿ ಒಮಿನಿ ವಾಹನದಲ್ಲಿ ಸಾಗಿಸುತ್ತಿದ್ದ 300 ಗ್ರಾಂ ಗಾಂಜಾವನ್ನು ಜಿಲ್ಲಾ ವಿಚಕ್ಷಣ ದಳ ವಶಪಡಿಸಿಕೊಂಡಿದೆ.

ನಗರದ ಬೇಲೂರು ರಸ್ತೆ ಕುಪ್ಪಳ್ಳಿ ಗ್ರಾಮದ ತಿರುವಿನ ಬಳಿ ಅ. 22 ರಂದು ಅಬಕಾರಿ ಉಪ ಆಯುಕ್ತರಾದ ಗೋಪಾಲಕೃಷ್ಣ ಗೌಡ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಎಂ.ಹೆಚ್ ರಘು ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಯೊಂದಿಗೆ ರಸ್ತೆಗಸ್ತು ನಡೆಸುತ್ತಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಕುಪ್ಪಳ್ಳಿ ಗ್ರಾಮದ ತಿರುವಿನ ಹತ್ತಿರ ರಸ್ತೆ ಕಾವಲು ನಡೆಸುತ್ತಿದ್ದಾಗ, ಜಿಲ್ಲಾ ವಿಚಕ್ಷಣ ದಳದ ಸಿಬ್ಬಂದಿಗಳು ವಾಹನ ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಸಂಖ್ಯೆ ಕೆಎ 03 ಎಂಜಿ 5486 ಮಾರುತಿ ಓಮಿನಿ ವಾಹನದಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. 

ಸದರಿ ವಾಹನ ಮತ್ತು ವಾಹನದಲ್ಲಿದ್ದ ಅಂದಾಜು ಮೌಲ್ಯ 25,000 ರೂಗಳ 300 ಗ್ರಾಂ ಗಾಂಜಾವನ್ನು ಹಾಗೂ ಅಂದಾಜು ಮೌಲ್ಯ 75,000 ರೂಗಳ ವಾಹನವನ್ನು ಇಲಾಖೆ ವಶಪಡಿಸಿಕೊಂಡಿದ್ದು ತನಿಖೆ ಮುಂದುವರೆದಿದೆ. 

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಎಂ.ಹೆಚ್ ರಘು, ಅಬಕಾರಿ ನಿರೀಕ್ಷಕರಾದ ಕಮಲಾಕರ್ ಡಿ. ಹೆಗಡೇಕರ್, ಉಪ ನಿರೀಕ್ಷಕರಾದ ಹೆಚ್.ಸಿ ಪಾಂಡುರಂಗ, ಅಬಕಾರಿ ರಕ್ಷಕರಾದ ರವಿಕುಮಾರ್ ಎಂ. ಮಹದೇವಸ್ವಾಮಿ ಹಾಘೂ ಚಾಲಕರಾದ ರವಿ ಭಾಗವಹಿಸಿದ್ದರು.

*

Post a Comment

0 Comments