ಹಳೇ_ಹಾಸನದ_ಹೊಸ_ನೆನಪುಗಳು

#ಹಳೇ_ಹಾಸನದ_ಹೊಸ_ನೆನಪುಗಳು

ಹುಟ್ಟಿ ಬೆಳೆದು ನಡೆದೇ ಓಡಾಡಿದ ಊರು ಹಾಸನ. ಪರವೂರುಗಳಿಂದ ರಾತ್ರಿವೇಳೆ  ಬಸ್ಸಿನಲ್ಲಿ  ಬರುತ್ತಿದ್ದೆ. ಅರೆನಿದ್ದೆಯಲ್ಲಿದ್ದರೂ ಹಾಸನ ಬಂತೆಂದು ವೇದ್ಯವಾಗುತ್ತಿತ್ತು. ಹಾಸನಕ್ಕೆ ಏಳೆಂಟು ಮೈಲಿ ದೂರದ ಶಾಂತಿಗ್ರಾಮ , ಮೊಸಳೆ ಹೊಸಳ್ಳಿ , ಆಲೂರುಗಳಿಗೆ ಬಂದಾಗಲೇ ನಮ್ಮೂರಿನ ಕಂಪಿನ ಗಾಳಿ ಹೊಡೆಯುತ್ತಿತ್ತು. ಯಾರೂ ಹೇಳೋದೇ ಬೇಡ ಹಾಸನ ಬಂತೆಂದು ಹೇಳಲು. ಅಂತಹ ವಿಶಿಷ್ಟ ಕಂಪು , ತಂಪಿನ ಹಾಸನ ಈವತ್ತಿಗೂ  ಬಡವರ ಊಟಿ. 
ಹಾಸನಿಗರೊಬ್ಬರ ( Ramaprasad k v ) ಸ್ವನುಡಿಗೆ ಒಂದಷ್ಟು ಸೇರಿಸಿರುವೆ  : 

It is generally around these festival days I miss my hometown very much -

ಜನವರಿಯ ಜಾತ್ರೆ.  
ನೆಹರೂ ಬಟರ್ ಸ್ಟೋರ್. ಮಂಗಳವಾರ ಸಂತೆ. 
ಚಳಿಗಾಲದ ಕಾವಳ. 
ಅದರ ಜೊತೆಗೆ ಸೊಗಡಿನ ಅವರೇಕಾಯಿ. 
ರಾತ್ರಿ ಓಡಾಡುವಾಗ ವಾಡಿಕೆಯಂತೆ ಬೊಗಳಿ ಬೆದರಿಸುವ ಬೀದಿ ನಾಯಿಗಳು. 

ಸುಧಾ ಹೋಟೆಲ್ಲಿನ ಮಸಾಲೆ ದೋಸೆ. 

ಕಟ್ಟಿನ ಕೆರೆಯ ಬಸ್ ಸ್ಟಾಂಡ್ ಮತ್ತು ತರಕಾರಿ ಮಾರ್ಕೆಟ್. 

ಹೊಸಲೈನಿನ ಲಾಲ್ ಮಾರ್ಕೆಟ್ 

ಜಾತ್ರೆ ಮಾಳಕ್ಕೆ ಹೋಗುವ ಅಲಂಕಾರ ಮಾಡಿರುವ ರಾಸುಗಳು. 

ಪಿಕ್ಚರ್ ಪ್ಯಾಲೇಸ್ ಮುಂದೆ ಚೌಕಾಸಿ ವ್ಯಾಪಾರ. 
ಗಂಧದ ಕೋಠಿ. 
ಸಂಪಿಗೆ ರಸ್ತೆ. 
ತೋಟಗಾರಿಕೆ ರಸ್ತೆ ದೊಡ್ಡಿ. 
ವರುಷದಲ್ಲಿ ಒಮ್ಮೆ ಮಾತ್ರ ಹತ್ತು ದಿನ ತೆರೆಯುವ ಹಾಸನಾಂಬೆಯ ಗುಡಿ. 
ಮೂರು ತಿಂಗಳು ಜೊರ್ರೋ ಎಂದು ಸುರಿಯುವ  ಸೋನೆ ಮಳೆ. 
ಗಣಪತಿ ಪೆಂಡಾಲಿನಲ್ಲಿ ಕದ್ರಿ ಗೋಪಾಲನಾಥ್ ಸ್ಯಾಕ್ಸಫೋನ್ , ಭದ್ರಗಿರಿ ಹರಿಕಥೆ , ಚಿಟ್ಟಿಬಾಬು ವೀಣೆ . . . .  .  ಕಚೇರಿಗಳು. 

ಡಬಲ್ ಟ್ಯಾಂಕ್ ಬಳಿ  ಆಡುವ ಹುಡುಗರು. 
ನಾಲ್ಕು ರಾಟೆ ಭಾವಿಯ ರಸ್ತೆ. 
ಮುಂದೆ 
ಅರಳಿಕಟ್ಟೆ ಶಾರದಮ್ಮನ ಸರ್ಕಲ್ ! 
ಕತ್ತೆಗಳು ಮಾತ್ರ ಓಡಾಡುವ ರೇಸ್ ಕೋರ್ಸ್ ರಸ್ತೆ. 
ಸ್ಲೇಟರ್ಸ್ ಹಾಲ್ .
ಪಕ್ಕದಲ್ಲೇ ಜೀವದಾಯಿನಿ ಮಿಷನ್ ಆಸ್ಪತ್ರೆ. 
ರಕ್ಷಣಾಪುರ 
ಬಸೆಟ್ಟಿಕೊಪ್ಪಲು 
ರವೀಂದ್ರ ನಗರ 
ಕೆ.ಆರ್.ಪುರಂ. 

ಗುಂಡೇಗೌಡನ ಕೊಪ್ಪಲಿನ  ಒಡೆದು ಮೂಡಿದ ಬಯಲು  ಗಣಪ. 

ಸುತ್ತಲ ಕಾಲೇಜುಗಳ ಬಯಲಾಂಜನೇಯರು !

ಆಂಜನೇಯನ ದೇವಸ್ಥಾನದ  ಸಂಸ್ಕೃತ ಶಾಲೆ. 
ಶನಿವಾರದ ಆಂಜನೇಯನ ಪೂಜೆ . 
ಈಶ್ವರ ದೇವಾಲಯದ ನವಗ್ರಹ ಪೂಜೆ. ಷಷ್ಠೀ ಕಾಲದ ಛಳಿಯಲ್ಲಿ ಬೆಳಗಿನ ಜಾವವೇ ತಣ್ಣೀರು ಸ್ನಾನ ಮಾಡಿ ನಡುಗುತ್ತ  ಬರುವ ಭಕ್ತರು. 

ವರ್ಷಗಟ್ಟಲೆ ಟಾರು ಕಾಣದೇ ಮಳೆಗಾಲದಲ್ಲಿ ಕೆಸರಿನ ಓಟಕ್ಕೆ ಲಾಯಕ್ಕಾದ ರಸ್ತೆಗಳು. 

 ಈಗಲೂ ಇರುವ ಮಹಾರಾಜರು 1930 ರಲ್ಲಿ ಹಾಕಿಸಿದ್ದ ಸಿಮೆಂಟ್ ರಸ್ತೆ . ಈಗ  ಮಂಗಳೂರು ಬೆಂಗಳೂರು ಹೆದ್ದಾರಿ. 
ಹಾಸನದವರೆಲ್ಲಾ ಈಜು ಕಲಿತ ಯಗಚಿ ಶ್ರೀರಾಮದೇವರ ಕಟ್ಟೆ. ಹಾಸನಿಗರಿಗೆ ಮೊದಲು ಇದೇ ಪಿಕ್ ನಿಕ್ ಸ್ಪಾಟ್ !. 

ಪಾರ್ಕಿನ ನಡುವೆ ಯಾರೂ ನೋಡಲು ಬಾರದ ಮ್ಯೂಸಿಯಂ.  ಅಲ್ಲಿಯ  ಸುಂದರ ಶಿಲ್ಪಗಳು.

ಮ್ಯೂಸಿಯಂ ಎದುರಿನ  ಸಿಮೆಂಟ್ ಬೆಂಚಿನ ಮೇಲೆ ನಡೆಯುತ್ತಿದ್ದ #ಅಧ್ಯಯನ_ಆವರಣ. ಪ್ರಸಿದ್ಧ ಚಿಂತಕರೆಲ್ಲಾ ಮಾತಾಡಿ ಹೋದ ಜಾಗ. 

ಮಹಾರಾಜ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡ್. ನಲವತ್ತು ಜನರ ಅರಮನೆ ವಾದ್ಯಗೋಷ್ಠಿ. 

ಬುಂಡೆ ಒಡೆದುಕೊಳ್ಳುವ ಜಾರುಬಂಡೆ ! 

ಈಗ ಪಾರ್ಕ್ ಎದುರಿನ ಏರು ಜವ್ವನೆ  ಹೇಮಾವತಿ ದೇವಿಯ ವಿಗ್ರಹ . ಆಕೆಯ ಭುಜದ ಮೇಲಿನ ಖಾಲಿ ಕೊಡ. 

ಜಾತ್ರೆಮಾಳದ ರಸ್ತೆಯಲ್ಲಿರುವ ಅಚ್ಚ ಬಿಳಿಯ ಅಮೃತಮಹಲ್ ಹೋರಿ. ಅದೇ ಹಾಸನದ ಆಸ್ಮಿತೆ.  ಎಪ್ಪತ್ತು ವರ್ಷದ ಹಿಂದೆ ಕಟೆದ ಶಿಲ್ಪಿಗೆ ನಮೋನಮಃ ! 
ಈಗ ರಸ್ತೆ ಅಗಲೀಕರಣಕ್ಕಾಗಿ ಸ್ಥಳಾಂತರವಾಗಿದೆಯಂತೆ .

 
ಬೊಮ್ಮಣ್ಣಯ್ಯನ ಪಾತ್ರೆ ಅಂಗಡಿ.
ಮಂಗಳೂರು ಪಾತ್ರೆ ಅಂಗಡಿಯ ಮುಂದೆ ಹೊಳೆ ಹೊಳೆಯುವ ತಾಮ್ರದ ಕೊಡಗಳು. ಪಾತ್ರೆ ಪರಡಿಗಳು.

ಬೆಟ್ಟಪ್ಪನ ಸೈಕಲ್ ಮಾರ್ಟ್. 
ಲಿಂಗಣ್ಣಯ್ಯನ ಸೈಕಲ್ ಶಾಪು. 

ಗೌಸ್ ಮೊಹಿಯುದ್ದೀನ್ .
ವೆರೈಟಿ ಸೆಂಟರ್ .
ಜಾಲಿ ಯೂನಿಯನ್ 
ಅಂಗಡಿಗಳು. 

ಹಾಸನ ತಾಲ್ಲೂಕಿನ ಹಸಿ ತರಕಾರಿಗಳು. ಬಿಳಿ ಸೌತೆಕಾಯಿ , ಚಿಕ್ಕ ಬೀನ್ಸ್ ಕಾಳು , ಕೆಂಪು ರಾಗಿ , ಜಕ್ಕೇನಹಳ್ಳಿಯ ಜೇನಿನಂತಹ ಹಲಸಿನಹಣ್ಣು. ಸಪ್ಪಸೀಗೇ ಸೊಪ್ಪಿನ ಘಮ ಘಮ !. ಹಾಸನದ್ದೇ ಆದ ಆ ಆಲೂಗೆಂಡೆ !. 
ಹಸಿರು ನೆಲಗಡಲೆ ,  ರಸಬಾಳೆಗಿಂತ ದಿವಿನಾದ ಪುಟ್ಟಬಾಳೆ ! 

ಎಳೇ ಸೌತೇಕಾಯ್ ಬಿಳೀ  ಸೌತೇಕಾಯ್ ಅಂತ ಬಸ್ ಕಿಟಕಿಗೇ ತಂದು ತಂದು ಮಾರುವ ಮಾರಾಟದ ಹುಡ್ಲು.

ರಾಮಚಂದ್ರ ಶೆಟ್ಟರ SRS  ಚಿನ್ನದಂಗಡಿ. 
ಮಠದ ಕಟ್ಟೆಯಲ್ಲಿ ಬಟ್ಟೆಯನ್ನೇ ಬಲೆ ಮಾಡಿ ಮೀನು ಹಿಡಿಯ ಹೋಗುವ ಶಾಲಾ  ಹುಡುಗರು. 

ಅಡ್ಲಿ ಮನೆ ರಸ್ತೆ ಆಚೆಯ 
ಆ ಹುಣಸಿನ ಕೆರೆ 
ಬೀರನಹಳ್ಳಿ ಕೆರೆ 
ರಾಮನ ಕಟ್ಟೆ 
ಚನ್ನಪಟ್ಟಣದ ಕೆರೆ. 

 ಮಹಾರಾಜ ಪಾರ್ಕಿನಲ್ಲಿದ್ದ  ಪಾಪದ ಜಿಂಕೆಗಳು. 

’ಅಲ್ಲಿ ಕರಡಿ ಇದೆಯಂತೆ ಮೇಲೆ’ ಅಂತ ಹುಡುಗರು ಹೆದರಿಸೋ ಸೀಗೇ ಗುಡ್ಡ. ರಾಟೆ ಕಂಬಗಳನ್ನು ಹಾಕಿ ಅದರ ಸೌಂದರ್ಯವೇ ನಾಶ.

ಉಪಗ್ರಹ ನಿಯಂತ್ರಣಾ ಇಸ್ರೋ ಕೇಂದ್ರ. ಗ್ಲೋಬ್ ಆಕಾರದಲ್ಲಿದ್ದ ಶಂಖದ ( ಹಳ್ಳಿ ) ಮೈದಾನದ ಬೋರೆಯೇ ಈಗ ಇಸ್ರೋ. 36 ಸಾವಿರ ಕಿ.ಮೀ ದೂರದ ಉಪಗ್ರಹದೊಂದಿಗೆ ಸಂಪರ್ಕ. ನಿಮ್ಮೆಲ್ಲರ ಟೀವಿ , ಮೊಬೈಲ್ ಫೋನ್ ಸಂಪರ್ಕ ಇರುವುದೇ ಇಲ್ಲಿಂದ ! ನಮ್ಮಿಂದಲೇ ನಿಮಗೆ ಕನೆಕ್ಷನ್ !. 

ಬಸ್ ಒಳಗೂ ಹೊರಗೂ ಮೇಲೂ ತುಂಬಿಕೊಂಡು ಹೋಗುವ ಹಳ್ಳಿಗರು. 

ಅತ್ಯಂತ ಶುದ್ಧ ಕನ್ನಡ ಪ್ರದೇಶ ಈ ಹಾಸನ . ಬೇರಾವ ಭಾಷೆಯ ಪ್ರಭಾವವೂ ಇಲ್ಲದ ಅಸಲಿ ಕನ್ನಡ. ಪ್ರಥಮ ಕನ್ನಡ  ಶಾಸನ ಹಾಸನದ ಹಲ್ಮಿಡಿ ಶಾಸನ. ಕನ್ನಡದ ವ್ಯಾಕರಣ ಕೊಟ್ಟ ಕೇಶೀರಾಜ ಇಲ್ಲಿಯವನೇ. ಕನ್ನಡ ಟೈಪ್ ರೈಟರ್ ಕಂಡು ಹಿಡಿದ ಅನಂತ ಸುಬ್ಬರಾಯರೂ ಇಲ್ಲಿಯವರೇ.‌

 ಅನ್ಯಭಾಷಿಕರ ಸೋಂಕೇ ಇಲ್ಲದ  ಕನ್ನಡ ಸಾಮ್ರಾಜ್ಯ  ಕಟ್ಟಿದ ಹೊಯ್ಸಳರೂ ಇಲ್ಲಿಯವರೇ. Chaste ಕನ್ನಡ ಎಲ್ಲಿದೆ ಅಂದರೆ ನೀವು  ಹಾಸನವನ್ನೇ ತೋರಿಸಬೇಕು !. 

ವ್ಯವಸಾಯದ ಉಪಕರಣಗಳನ್ನು ತಯಾರಿಸುತ್ತಿದ್ದ ಮೈಸೂರು ಇಂಪ್ಲಿಮೆಂಟ್ಸ್  ಫ್ಯಾಕ್ಟರಿ. ಕರ್ನಾಟಕದಲ್ಲೇ ಮೊದಲು. ಇದರ  ಕ್ವಾಲಿಟಿ ಈಗಲೂ ಪ್ರಸಿದ್ಧ.

 ಬೀದಿಯಲ್ಲೇ ಜಗಳಕ್ಕಿಳಿವ ರಂಗೋಲಿ ಗುಂಡಿಯ ಹೆಂಗಸರು. 
ಇರಾನಿ ಬಂಗಲೆ. 
ಶಂಕರ ಮಠ. 
ಐಡಿಯಲ್ ಫೋಟೋ ಸ್ಟುಡಿಯೋ. 
ಕಸ್ತೂರಿ ಹೋಟೆಲ್. 

ಘಮಘಮ ಹುರಿಗಾಳು,ಖಾರದ ರೊಟ್ಟಿ ಸಿಗುವ ಬೇಕರಿ. ಹಾಸನ ಬೇಕರಿ. 

ಊರು. ನನ್ನ ಊರು. ನೂರು ಊರು ನೋಡಿದರೂ, ನನಗೆ ಯಾವತ್ತೂ ನನ್ನ ಊರಾಗೇ ಉಳಿಯುವ ಹಾಸನ. 
ಜೀವನದ ಮೊದಲರ್ಧವನ್ನು ಕಳೆದ ಹಾಸನ. 
ಹಾಸನಾಂಬೆಯ ಹಾಸನ. ಹೇಮಾವತಿಯ ಹಾಸನ. ಕೆಂಪುರಾಗಿ , ಕೆಂಪು ಸೌತೆಕಾಯಿ ಆಲೂಗೆಡ್ಡೆಯ ಹಾಸನ. ಹೊಯ್ಸಳ ರಾಜರ ಹಾಸನ.

ಗೆಂಡೆಕಟ್ಟೆ ಫಾರೆಸ್ಟ್ ! 
ಹೇಮಗಂಗೋತ್ರಿ. 

ಪಕ್ಕದಲ್ಲೇ ಇರುವ 
ಬುಂಡಾಳು ಬೋರೆ ( ತಲೆ ಬುರುಡೆ ಹೊಡೆದು ಲೂಟಿ ಮಾಡುತ್ತಿದ್ದ ಜಾಗ ). 
ನನ್ನ ದೊಡ್ಡಪ್ಪ ಮಂಜೇಗೌಡರ ಮೇಲೆ ಹಲ್ಲೆ ಮಾಡಿ , ಸಂತೆಯಲ್ಲಿ ಹೋರಿಗಳನ್ನು ಮಾರಿದ್ದ ದುಡ್ಡು 215 ರುಪಾಯಿ ದೋಚಿ , ಜೀವ ಉಳಿಸಿ ಕಳಿಸಿದ್ದರು.( 1952 ). 

 ಕಟ್ಟಿನಕೆರೆ,  ದೇವಿಗೆರೆ ದಡದಲ್ಲಿರುವ ಹಚ್ಚ ಹಸಿರು ತರಕಾರಿ ಮಾರ್ಕೆಟ್ !

#ಇನ್ನೂ_ಸೇರಿಸಬೇಕಾದ_ಸಂಗತಿಗಳು 

ವಸ್ತು ಪ್ರದರ್ಶನದಲ್ಲಿ ಸಿಕ್ಕುವ 
 ಆಟಂಬಾಂಬ್ ಪುಳಿಯೋಗರೆ , ರಾಕೆಟ್   ಪುಳಿಯೋಗರೆ , 
ಐಯಂಗಾರ್ ಪುಳಿಯೋಗರೆ , 
ಪಾಂ ಪಾಂ ಪುಳಿಯೋಗರೆ

ಜನವರಿ ಜಾತ್ರೆಯ ಫಳ ಫಳ ಹೊಳೆಯುವ  ಖರ್ಜೂರ , ಕಲ್ಯಾಣಸೇವೆ ,  
ಕಡಲೇ ಮಿಠಾಯಿ 
ರೊಯ್ಞ್ ರೊಯ್ಞ್ ರಾಟವಾಳ . 
ನಾಲ್ಕೈದು ನಾಟಕದ ಕಂಪನಿಗಳು 
ಮರೆಯಲಾದೀತೇ?

ನಮ್ಮೂರಿಗೆ ನಮ್ಮೂರೇ ಸಾಟಿ, ಮುನಿವೆಂಕಟೇಗೌಡರು,  ಮಕ್ಕಳ ಡಾಕ್ಟ್ರು ದೊಡ್ಡೆಗೌಡ್ರು ಆಸ್ಪತ್ರೆಗಳು ಮಿಸ್ ಮಾಡಿಕೊಳ್ಳುವುದೇಗೆ?

ಬಾಂಬೆ ಸ್ವೀಟ್ ಸ್ಟಾಲ್ , 
ಲಕ್ಷ್ಮೀ ಸ್ವೀಟ್ ಸ್ಟಾಲ್ 
ಇಲ್ಲಿನ ಸ್ಪೆಷಲ್ ಮೈಸೂರು ಪಾಕ್.
ಮಿಲ್ಕ್ ಕೇಕ್. ಮರೆವುದು ಹೇಗೆ ?. 
  
ಘಾಟು ಘಾಟಾದ  ಜಿಂಜರ್ ಕ್ರಷ್ ನ ಹಿಲಾಲ್ ಸ್ಟೋರ್ಸ್.

ಶ್ರೀನಿವಾಸ ಕಾಫಿ ಡಿಪೋ , 
ಚಿಕ್ಕಮಗಳೂರು ಕಾಫಿ ವರ್ಕ್ಸ್ , 

ಹರ್ಷ ಹೋಟೆಲ್ , ಹರ್ಷಮಹಲ್ ,  
 ಕ್ವಾಲಿಟಿ 🥂ರೆಸ್ಟೋರೆಂಟ್ , 
ರಂಗಸ್ವಾಮಿ ಮಿಲ್ಟ್ರಿ ಹೋಟೆಲ್ , 
ಮಮತಾ ಮೀನು ಹೋಟೆಲ್ , 
ಬಿಸ್ಮಿಲ್ಲಾ ಹೋಟೆಲ್ , 
ಪ್ಯಾರಿಸ್ ಕಾರ್ನರ್ , 
ತಾಜ್ ಮಹಲ್ ಹೋಟೆಲ್ ,  ಬಿಟ್ಟೋಯ್ತೇನೋ ಅನಿಸುತ್ತದೆ 😜

ಹಲವಾರು ದಶಕಗಳಿಂದ ಇದ್ದು ಈಗ ಇಲ್ಲದಿರುವ ಸ್ಥಳಗಳೆಂದರೆ ಕಸ್ತೂರಿ ಹೋಟ್ಲು,  
ಅಯ್ಯರ್ ಹೋಟ್ಲು , ರಾಘವಾಚಾರ್ರ ಹೋಟೆಲ್ , 
LJL ಹೋಂ ( ಲಕ್ಷ್ಮೀ ಜನಾರ್ದನ ಲಂಚ್ ) ಪಾರ್ಕ್ನ ಜಿಂಕೆಗಳು ,  
ಗೌರ್ಮೆಂಟ್ ಹೈಸ್ಕೂಲ್ ಮೈದಾನ, 

ಮುನ್ಸಿಪಲ್ ಮಿಡಲ್  ಸ್ಕೂಲು,

 ಗವರ್ನಮೆಂಟ್ ಹೈಸ್ಕೂಲ್ ನ ದೊಡ್ಡ ಮೈದಾನ. ಇಲ್ಲಿ ಭಾಷಣ ಮಾಡುತ್ತಿದ್ದ ನೆಹರೂ ,  ಇಂದಿರಾಗಾಂಧಿ, ವಾಜಪೇಯಿ  ಮುಂತಾದ ರಾಷ್ಟ್ರೀಯ ನಾಯಕರು. 

ಹಳೇ ಜವೇನಳ್ಳಿಮಟದ ಕೆರೆ ( ಈಗ ಹೊಸದಾಗಿ ಸಣ್ಣಕೆರೆ ಮಾಡಿದ್ದಾರೆ), 
ಪ್ರಸಿದ್ಧ ಹಾಸನ ವಸ್ತುಪ್ರದರ್ಶನ, ಹಿಂದಿನ ವೈಭವದ ದನಗಳ ಜಾತ್ರೆ  ಇತ್ಯಾದಿ.

ಬಡವರ ಊಟಿಯಾದ ಹಾಸನಪುರ ಅದರೊಳು ಮೆರಯುವ ಕಾನ್ವೆಂಟ್ ಮಂದಿರ ಗಳಾದ 
ಸೆಂಟ್ ಫಿಲೋಮಿನ ಕಾನ್ವೆಂಟ್ ಮತ್ತು 
ಸೆಂಟ್ ಜೋಸೆಫ್ ಸ್ಕೂಲ್ , 

ಹಾಸನದ ಮೊದಲ ಚಿತ್ರಮಂದಿರ...  
ಇಂಪೀರಿಯಲ್ ಟಾಕಿಸ್ ಮತ್ತು ಅದಕ್ಕೆ  ಹೊಂದಿಕೊಂಡಂತಿದ್ದ  ರಾಘವಾಚಾರ್ರು ಹೋಟ್ಲು.
ಪಿಕ್ಚರ್ ಪ್ಯಾಲೇಸ್ , 
ಭಾನು , ಸಹ್ಯಾದ್ರಿ , 
ಗುರು ಚಿತ್ರ ಮಂದಿರಗಳು 

ಜ್ಯೂಬಿಲಿ ಮೈದಾನದಲ್ಲಿದ್ದ 
ಜ್ಯೂಬಿಲಿ ಹೈಸ್ಕೂಲ್ , 
ಕಾರೋನೇಷನ್ ಹಾಲ್  ಲೈಬ್ರರಿ , 
ವಾಣಿ ವಿಲಾಸ ಮಿಡಲ್ ಸ್ಕೂಲ್ , ನರ್ಸರಿ ಶಾಲೆ .

ಗಂಧದ ಕೋಠಿ , 
ಇರಾನಿ ಬಂಗಲೆ ,
ಗೌರ್ಮೆಂಟ್ ಕಾಲೇಜು .
ಸ್ಟೇಡಿಯಂ. 
ಇಂಜಿನಿಯರಿಂಗ್ ಕಾಲೇಜ್. 

ಇನ್ನೂ ಏನೇನಿದೆ ? ಏನೇನು ಇಲ್ಲ ?

#ಹಾಸನ_ಟೌನಿನ_ಸೊಗಸು_ಸೌರಭವನ್ನು_ಆಸ್ವಾದಿಸಿದ_ಸಹೃದಯರಿಗೆ : 

ಹಾಸನಿಗ ಜೆ.ಬಿ.ರಂಗಸ್ವಾಮಿ. ಈಗ ಮೈಸೂರು.

Post a Comment

0 Comments