ಪಿಎಸೈ ಕಿರಣ್ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತ ತಲುಪಿದ ತನಿಖೆ

ಪಿಎಸೈ ಕಿರಣ್ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತ ತಲುಪಿದ ತನಿಖೆ

ಹಾಸನ: ಚನ್ನರಾಯಪಟ್ಟಣ ನಗರಠಾಣೆ ಪಿಎಸ್‍ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.
ಮಂಗಳವಾರ ಜನಮಿತ್ರ ನೊಂದಿಗೆ ಮಾತನಾಡಿದ ಅವರು, ಅರಸೀಕೆರೆ ಡಿವೈಎಸ್ಪಿ ನಾಗೇಶ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ನಾವು ಎಲ್ಲಾ ಆಯಾಮಗಳಲ್ಲೂ ಕೂಲಂಕಷ ವಿಚಾರಣೆ ಮಾಡುತ್ತಿದ್ದೇವೆ. ಯಾವುದನ್ನೂ ಬಿಟ್ಟಿಲ್ಲ ಎಂದರು. ಮುಂದಿನ ನಾಲ್ಕೈದು ದಿನಗಳಲ್ಲಿ ಪಿಎಸೈ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ಮುಗಿಯಲಿದ್ದು, ನಂತರ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಬಹಿರಂಗ ಪಡಿಸುವುದಾಗಿ ಸ್ಪಷ್ಟ ಪಡಿಸಿದರು.
ಕಿರಣ್ ಆತ್ಮಹತ್ಯೆ ನಂತರ ಅನೇಕ ಊಹಾಪೋಹ, ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆಂಗಲ್ ಗಳಲ್ಲೂ ತನಿಖೆ ಮಾಡಲಾಗುತ್ತಿದೆ. ಮನೆಯವರ ಹೇಳಿಕೆ, ಅವರು ಯಾರ ಮೇಲೆ ಸಂಶಯ ವ್ಯಕ್ತ ಪಡಿಸಿದ್ದಾರೆ?. ಘಟನೆ ನಡೆದ ದಿನದಂದು ಯಾವ ಪರಿಸ್ಥಿತಿ ಇತ್ತು? ನಾನೂ ಸೇರಿದಂತೆ ಮೇಲಧಿಕಾರಿಗಳಿಂದ ಒತ್ತಡ ಬಂದಿತ್ತೇ? ಇಲ್ಲವೇ ರಾಜಕೀಯ ಒತ್ತಡ ಕಾರಣವೇ? ಈ ಎಲ್ಲದಕ್ಕೂ ಮೀರಿ ಬೇರೆ ಕಾರಣ ಇರಬಹುದೇ ಎಂಬಿತ್ಯಾದಿ ಮಾಹಿತಿ ಆಧರಿಸಿ ಇನ್‍ವೆಸ್ಟಿಗೇಶನ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Post a Comment

0 Comments