ಚನ್ನರಾಯಪಟ್ಟಣ ತಾಲ್ಲೂಕಿನ ಕೊಲೆ ಆರೋಪಿ ಮೇಲೆ ಫೈರಿಂಗ್

ಹಾಸನದಲ್ಲಿ ಸದ್ದು ಮಾಡಿದ ಪೊಲೀಸರ ಬಂದೂಕು
*ಚನ್ನರಾಯಪಟ್ಟಣ ತಾಲ್ಲೂಕಿನ ಕೊಲೆ ಆರೋಪಿ ಮೇಲೆ ಫೈರಿಂಗ್ 
ಸ್ಥಳಕ್ಕೆ ಐಜಿ ವಿಫೂಲ್ ಕುಮಾರ್ ಬೇಟಿ ನೀಡಿ ಸ್ಥಳ ಪರಿಶೀಲನೆ. 
*ಹಾಸನ ಎಸ್ಪಿ ಶ್ರೀನಿವಾಸ್ ಗೌಡ ತಂಡದಿಂದ ಪುಂಡರಿಗೆ ದಿಟ್ಟ ಉತ್ತರ.
ಜೋಡಿ ಕೊಲೆ ಮಾಡಿ ಕೋಳಿ ಫಾರಂನಲ್ಲಿ ಅಡಗಿದ್ದ ಹಂತಕರು – ಪೊಲೀಸರಿಂದ ಗುಂಡೇಟು. 
ಹಲ್ಲೆಗೆ ಒಳಗಾದ ಪಿಎಸ್ಐ ಸಿದ್ದಾರಾಮೇಶ್ವರ ಅವರನ್ನು ಬೇಟಿ ಮಾಡಿ ಆರೋಗ್ಯ ವಿಚಾರಿಸಿದ ಐಜಿಪಿ ವಿಪೂಲ್ ಕುಮಾರ್ .
ಹಾಸನ:  ಚನ್ನರಾಯಪಟ್ಟಣದಲ್ಲಿ ಎರಡು ದಿನಗಳ ಹಿಂದೆ ಆಲಗೊಂಡನಹಳ್ಳಿ ಜೋಡಿ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಕೋಳಿ ಫಾರಂ ನಲ್ಲಿ ಅಡಗಿ ಕುಳಿತಿದ್ದ ಆರೋಪಿಗಳ ಬಂಧಿಸುವ ವೇಳೆ ಪೊಲೀಸರಿಂದ ಫೈರಿಂಗ್ ಮಾಡಿದ್ದಾರೆ.

ಷರಣಾಗುವಂತೆ ಮನವಿ ಮಾಡಿದರೂ ಬಗ್ಗದ ಆರೋಪಿ ಪ್ರಸಾದ್ ಅಲಿಯಾಸ್ ಗುಂಡ  ಎಂಬಾತನ ಮೇಲೆ ಫೈರಿಂಗ್ ಮಾಡಲಾಗಿದೆ‌. ಬಂಧಿಸಲು ಮುಂದಾದ ಡಿಸಿಐಬಿ ಇನ್ಸ್ಪೆಕ್ಟರ್ ವಿನಯ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವೇಳೆ ಇನ್ಸ್ಪೆಕ್ಟರ್ ವಿನಯ್ ಎಡಗೈಗೆ ಗಾಯ ಗೊಂಡಿದ್ದಾರೆ. ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಮತ್ತೊಬ್ಬ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ್ ಅವರಿಂದ ಫೈರಿಂಗ್ ಮಾಡಲಾಗಿದೆ‌.

ಆರೋಪಿ ಪ್ರಸಾದ್ ಮಂಡಿಗೆ ಭಾಗಕ್ಕೆ ಗುಂಡೇಟು ಬಿದ್ದಿದ್ದರಿಂದ ಗಾಯಗೊಂಡ ಆರೋಪಿ ಮತ್ತು ಇನ್ಸ್ಪೆಕ್ಟರ್ ವಿನಯ್ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೂ ಮೂವರು ಆರೋಪಿಗಳಿಗಾಗಿ ಮುಂದುವರೆದ ಶೋಧ ಕಾರ್ಯ ನಡೆಯುತ್ತಿದ್ದು, ಲಾಕ್ ಡೌನ್ ಹಿನ್ನಲೆ ಬೆಂಗಳೂರಿನಿಂದ 
ಸ್ವ ಗ್ರಾಮಕ್ಕೆ ಒಂದು ತಿಂಗಳ ಹಿಂದೆ ಬಂದಿದ್ದ ಆರೋಪಿಗಳು ಹಣಕ್ಕಾಗಿ ವೃದ್ಧ ದಂಪತಿಗಳನ್ನ ಕೊಲೆ ಮಾಡಿದ್ದರು.

ಚನ್ನರಾಯಪಟ್ಟಣ ತಾಲ್ಲೂಕಿನ, ಅಣ್ಣೇನಹಳ್ಳಿ ಸಮೀಪ ಜಮೀನೊಂದರ ಬಳಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಫೈರಿಂಗ್‌ನಲ್ಲಿ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದರಿಂದ ಸ್ಥಳಕ್ಕೆ ಸ್ಥಳಕ್ಕೆ ದಕ್ಷಿಣ ವಲಯ ಐಜಿ ವಿಫುಲ್ ಕುಮಾರ್ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ, ಎಎಸ್ಪಿ ನಂದಿನಿ  ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments