ಟಿಸಿ ಕೊಡದ ಸ್ಟೂಡೆಂಟ್ ಪಿಯು ಕಾಲೇಜು, ವಿದ್ಯಾರ್ಥಿಗಳು-ಪೋಷಕರ ಪ್ರತಿಭಟನೆ

ಟಿಸಿ ಕೊಡದ ಸ್ಟೂಡೆಂಟ್ ಪಿಯು ಕಾಲೇಜು, ವಿದ್ಯಾರ್ಥಿಗಳು-ಪೋಷಕರ ಪ್ರತಿಭಟನೆ

ಹಾಸನ: ಪ್ರಥಮ ಪಿಯುಸಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಹೋಗಲು ಟಿಸಿ ಕೇಳಿದರೇ ಕೊಡಲು ನಿರಾಕರಿಸಿದ ಸ್ಟೂಡೆಂಟ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ನಡವಳಿಕೆ ಖಂಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶವ್ಯಕ್ತಪಡಿಸಿದಲ್ಲದೆ ಕಾಲೇಜು ಮುಂದೆ ಧರಣಿ ಕುಳಿತರು. ಕಳೆದ ಹಲವಾರು ತಿಂಗಳಿನಿಂದ ಸಂಬಳ ನೀಡದೆ ವಂಚಿತರಾಗಿರುವ ಉಪನ್ಯಾಸಕರು ಕೂಡ ಪ್ರತಿಭಟನೆಗೆ ಮುಂದಾದರು.

​ ​ ​ ​ ​ ​ ಹೌದು ಈ ಪ್ರತಿಭಟನೆ ನಡೆದಿದ್ದು, ನಗರದ ರಿಂಗ್ ರಸ್ತೆ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಎದುರು ಇರುವ ಸ್ಟೂಡೆಂಟ್ ಪಿಯು ಕಾಲೇಜಿನಲ್ಲಿ. ಪ್ರಥಮ ಪಿಯುಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮತ್ತು ಎಲ್ಲಾ ಉಪನ್ಯಾಸಕರು ಬೇರೆ ಕಾಲೇಜಿಗೆ ಹೋಗುತ್ತಿರುವುದರಿಂದ ವರ್ಗಾವಣೆ ಪತ್ರವನ್ನು ಕೇಳಲು ಕಾಲೇಜಿಗೆ ಹೋದ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸ್ಪಂದಿಸಲಿಲ್ಲ. ಹಲವು ಬಾರಿ ಕಾಲೇಜಿಗೆ ಹೋದಾಗ ಅವಶ್ಯಕತೆ ಇಲ್ಲದ ದಾಖಲೆಗಳನ್ನು ಕೇಳಿದ್ದರು. ಎಲ್ಲಾ ದಾಖಲೆ ಕೊಟ್ಟರೂ ಕೂಡ ವರ್ಗಾವಣೆ ಪತ್ರವನ್ನು ನೀಡಲು ನಿರಾಕರಿಸಿರುವುದಾಗಿ ದೂರಿದರು. ಇಂದು ಕೊರೋನಾ ಎಂಬ ಮಹಾಮಾರಿ ಆವರಿಸಿ ಸಾವು-ನೋವು ಸಂಭವಿಸುತ್ತಿರುವ ಸಂದರ್ಭದಲ್ಲಿ ಅನವಶ್ಯಕವಾಗಿ ಪದೆ ಪದೆ ಕಾಲೇಜು ಬಳಿ ಬರುವಂತೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಅನಾನುಕೂಲವಾಗಿದ್ದು ಕೂಡಲೇ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಸೇರಲು ಟಿಸಿ ಕೊಡಬೇಕು. ಮತ್ತು ಹಲವು ತಿಂಗಳಿನಿಂದ ಸಂಬಳ ಕೊಡದಿರುವ ನಾವುಗಳು ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಕೂಡಲೇ ಬೇರೆ ಕಾಲೇಜಿಗೆ ಉಪನ್ಯಾಸ ಮಾಡಲು ವರ್ಗಾವಣೆ ಪತ್ರ ಕೊಡಬೇಕು ಎಂದು ತಮ್ಮ ಬೇಡಿಕೆಯಲ್ಲಿ ಮನವಿ ಮಾಡಿದ್ದಾರೆ.

news credit Janathamadhyama

Post a Comment

0 Comments