ಭಾರೀ ಮಳೆ ಸೂಚನೆ: ಜಿಲ್ಲೆಯ ಜನರಿಗೆ ಜಿಲ್ಲಾಡಳಿತ ಎಚ್ಚರ

ಭಾರೀ ಮಳೆ ಸೂಚನೆ: ಜಿಲ್ಲೆಯ ಜನರಿಗೆ ಜಿಲ್ಲಾಡಳಿತ ಎಚ್ಚರ

ಹಾಸನ: ಈವರೆಗೂ ಹಿತಮಿತ ಎಂಬಂತೆ ಇದ್ದ ಮಳೆ ಜಿಲ್ಲೆಯಲ್ಲಿ ಒಮ್ಮೊಂದೊಮ್ಮೆಗೇ ಭೋರ್ಗರೆಯುವ ಮುನ್ಸೂಚನೆ ನೀಡಿದೆ. 
ಹವಾಮಾನ ಇಲಾಖೆಯ ವರದಿಯಂತೆ ಬುಧವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳವರೆಗೆ ಭಾರೀ ಮಳೆಯಾಗುವ ಸಂಭವವಿದ್ದು, ಸಾರ್ವಜನಿಕರು ಅಗತ್ಯ ಎಚ್ಚರಿಕೆ ವಹಿಸಿ ಕೆರೆ-ಕಟ್ಟೆ ಹಾಗೂ ನದಿ ಪಾತ್ರಗಳ ಹತ್ತಿರ ಜನರು ಹೋಗದಿರಲು ಹಾಗೂ ಜಾನುವಾರುಗಳನ್ನು ಬಿಡದಿರಲು ಕೋರಿದೆ. 
ಜಿಲ್ಲೆಯಲ್ಲಿ ಗುಡ್ಡ ಕುಸಿತಾ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಹಾಗೂ ಜಿಲ್ಲೆಯಾ ನದಿಗಳಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗುವುದರಿಂದ ನದಿಪಾತ್ರಗಳ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ತಿಳಿಸಿದೆ. ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರುವಂತೆ ಸಹಕರಿಸಲು ಈ ಮೂಲಕ ಕೋರಿದೆ.

ತುರ್ತು ಸಂದರ್ಭಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿ ದೂರವಾಣಿ ಸಂಖ್ಯೆ: 08172-261111 ಹಾಗೂ ಉಚಿತಾ ಸಹಾಯವಾಣಿ 1077 ಗೆ ಕರೆ ಮಾಡಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ. ಇದರಿಂದಾಗಿ ಕಳೆದ ವರ್ಷದ ಹುಚ್ಚು ಮಳೆಯ ಕಹಿ ನೆನಪು ಮೂಡಿದೆ. 

ಸಕಲೇಶಪುರ ತಾಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಮಳೆಯೊಂದಿಗೆ ಬೀಸುತ್ತಿರುವ ಬಿರುಗಾಳಿಗೆ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು ನೂರಾರು ಮರ, ವಿದ್ಯುತ್ ಕಂಬಗಳು ಧರೆಗುರುಳಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಗಾಳಿಯ ರಭಸಕ್ಕೆ ಪಟ್ಟಣದ ಚಂಪಕನಗರ ಬಡಾವಣೆಯ ಅಂಗಡಿ ಮಂಜುನಾಥ್ ಎಂಬುವರ ಮನೆಯ ಮೇಲ್ಛಾವಣಿ ಶೀಟ್‍ಗಳು ಹಾರಿ ಹೋಗಿದ್ದು ಇದರಿಂದಾಗಿ ಅಪಾರ ನಷ್ಟವುಂಟಾಗಿದೆ.  ಹಲಸುಲಿಗೆ ಗ್ರಾಮದಲ್ಲಿ  5 ಮರ ಹಾಗೂ ವಿದ್ಯುತ್ ಕಂಬಗಳು ಹಾಗೂ ಒಂದು ಟ್ರಾನ್ಸ್ ಫಾರ್ಮರ್ ರಸ್ತೆಗೆ ಉರುಳಿ ಬಿದ್ದಿವೆ. ಕುಡುಗರಹಳ್ಳಿ ಬಡಾವಣೆಯ ಮಿಲಿಟರಿ ಕ್ಯಾಂಪ್ ಬಳಿ ಮರವೊಂದು ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿವೆ. 
ತಾಲೂಕಿನ ಜಾನೇಕೆರೆ, ಅರೆಕೆರೆ, ವಣಗೂರು-ಜನ್ನಾಪುರ ರಾಜ್ಯ ಹೆz್ದÁರಿ ಯಲ್ಲಿ ಹತ್ತಾರು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಕೆಲ ಕಾಲ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತ ಗೊಂಡಿತ್ತು. ಸಕಲೇಶಪುರ -ಬೇಲೂರು ರಸ್ತೆ, ಹಾನುಬಾಳ್-ಸಕಲೇಶಪುರ ರಸ್ತೆ, ಸಕಲೇಶಪುರ- ವಿರಾಜಪೇಟೆ ರಸ್ತೆ ಸೇರಿದಂತೆ ಬಹುತೇಕ ಎ¯್ಲÁ ರಾಜ್ಯ ಹೆz್ದÁರಿಗಳಲ್ಲಿ ಮರಗಳು ರಸ್ತೆಗೆ ಬಿದ್ದಿವೆ. ಪಟ್ಟಣ ಸೇರಿದಂತೆ ತಾಲೂಕಿನ¯್ಲÉಡೆ ವಿದ್ಯುತ್ ಪೂರೈಕೆ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತದ ಬೆಳೆ ನೀರಿನಿಂದ ಜಲಾವೃತಗೊಂಡಿದೆ. 

ಕಾರಿನ ಮೇಲೆ ಬಿದ್ದ ಮರ:
ಸಕಲೇಶಪುರ ತಾಲೂಕಿನ ಬಿಸಿಲೆಘಾಟ್‍ನಲ್ಲಿ ರಸ್ತೆಗೆ ಉರುಳಿಬಿದ್ದ ಭಾರೀ ಗಾತ್ರದ ಮರಗಳು, ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿಬಿದ್ದ ಮರ
ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಮರ ರಸ್ತೆಗೆ ಉರುಳಿಬಿದ್ದಿದ್ದರಿಂದ  ಬಿಸಿಲೆ ಘಾಟ್ ನಲ್ಲಿ ಸಂಚಾರ ಸ್ಥಗಿತ
ಮರ ತೆರವು ಮಾಡೋ ಕಾರ್ಯಾಚರಣೆ ಆರಂಭಿಸಿದ ಸ್ಥಳೀಯ ಆಡಳಿತ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿರೊ ವರುಣ

ಕಂಟ್ರೋಲ್ ರೂಂ ಸ್ಥಾಪನೆ:
ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಪಟ್ಟಣದ ತಾಲೂಕು ಆಡಳಿತದಿಂದ ವಿಪತ್ತು ಎದುರಿಸಲು ಸಜ್ಜಾಗಿದ್ದು ಸಹಾಯಕ್ಕಾಗಿ ಕಂಟ್ರೋಲ್ ರೂಂ ತೆರೆಯಲಾಗಿದೆ. 
ಬುಧವಾರ ಪಟಟ್ಣದ ಮಿನಿವಿಧಾನಸೌಧದಲ್ಲಿ ಮಳೆ ವಿಪತ್ತು ಎದುರಿಸಲು ಸಭೆ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ ಮಳೆ ವಿಪತ್ತು ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದೆ. ಯಾವುದೆ ರೀತಿಯ ವಿಪತ್ತು ಸಂಭವಿಸಿದಲ್ಲಿ ಕೂಡಲೆ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆಗೆ 08173-244004 ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

Post a Comment

0 Comments