ಬೇಲೂರು: ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಗಚಿ ಜಲಾಶಯ ಭರ್ತಿಯಾಗುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ

ಬೇಲೂರು: ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಗಚಿ ಜಲಾಶಯ ಭರ್ತಿಯಾಗುವ ಹಿನ್ನಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ನಾಲ್ಕು ಕ್ರಸ್ ಗೇಟ್ ಮೂಲಕ ಸುಮಾರು 1500 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 
ಎರಡು ದಿನಗಳಿಂದ ಸುರಿಯುತ್ತಿರುವ ಯಗಚಿ ಹಿನ್ನೀರಿನ ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಬೇಲೂರಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಯಗಚಿ ಜಲಾಶಯಕ್ಕೆ 1700 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು 1500 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. 
964.60 ಮೀ ನೀರಿ ಸಂಗ್ರಹ ಸಮಾಥ್ರ್ಯವಿರುವ ಯಗಚಿ ಜಲಾಶಯದಲ್ಲಿ ಪ್ರಸ್ತುತ 964.40 .ಮೀ ನೀರು ಸಂಗ್ರಹವಾಗಿದ್ದು ಜಲಾಶಯ ಭರ್ತಿಯಾಗಲು ಕೇವಲ 0.20 ಮೀ ಬಾಕಿ ಇದೆ.
ಇದೇ ರೀತಿ ಮಳೆಯಾದಲ್ಲಿ ಜಲಾಶಯವು ಭರ್ತಿಯಾಗಲಿದೆ. ಆದ್ದರಿಂದ ಜಲಾಶಯ ಕೆಳಭಾಗದಲ್ಲಿರುವಂತವರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಂದು ಎಂದು ಯಗಚಿ ಇಂಜಿನಿಯರ್ ತಿಮ್ಮೇಗೌಡ ತಿಳಿಸಿದ್ದಾರೆ.

Post a Comment

0 Comments