ಹಾಸನ ಬಿ.ಎಂ. ರಸ್ತೆಯ ಬಂದಿಖಾನೆ ಉದ್ಧಕ್ಕೂ ಕಬ್ಬಿಣದ ಗ್ರಿಲ್ ಅಳವಡಿಕೆ ಮಧ್ಯೆ ಓಡಾಡಲು ಅವಕಾಶ ಕಲ್ಪಿಸುವಂತೆ ನಿವಾಸಿಗಳು, ವ್ಯಾಪಾರಸ್ತರ ಮನವಿ

ಹಾಸನ ನಗರದ ಬಿ.ಎಂ. ರಸ್ತೆಯ ಬಂದಿಖಾನೆ ಉದ್ದಕ್ಕೂ ಕಬ್ಬಿಣದ ಗ್ರಿಲ್ ಅಳವಡಿಕೆ ಮಾಡಲಾಗಿದ್ದು, ಅಜಾದ್ ರಸ್ತೆ ಮತ್ತು ಗುಂಡಿ ರಸ್ತೆಗೆ ಸಂಪರ್ಕಿಸುವ ಮಧ್ಯೆ ಓಡಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಸುತ್ತ ಮುತ್ತ ನಿವಾಸಿಗಳು ಮತ್ತು ವ್ಯಾಪಾರಸ್ತರು ರಸ್ತೆ ಮಧ್ಯೆ ನಿಂತು ಮೌನ ಪ್ರತಿಭಟಿಸಿ ಮನವಿ ಮಾಡಿದ್ದಾರೆ.

​ ​ ​ ​ ​ ಕೆಲ ದಿನಗಳ ಹಿಂದೆ ಬಿ.ಎಂ. ರಸ್ತೆ, ಬಂದಿಖಾನೆ ಹಾಗೂ ಸಂತೇಪೇಟೆ ವೃತ್ತದ ಉದ್ದಕ್ಕೂ ಇರುವ ಡಿವೇಡರ್ ಗೆ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಆದರೇ ಕೆಲ ಮುಖ್ಯ ಅಡ್ಡ ರಸ್ತೆಗೆ ಸಂಪರ್ಕಿಸುವ ಕಡೆ ಓಡಾಡಲು ಜಾಗ ಬಿಡದೆ ಕಬ್ಬಿಣ ಅಳವಡಿಸಿರುವುದು ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಇದಕ್ಕಿಂತ ಶಾಲಾ ಮಕ್ಕಳು ಕಿಲೋ ಮೀಟರ್ ಬಳಸಿಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆ ಎಂದರು. ಕೂಡಲೇ ಇತ್ತ ಕಡೆ ಗಮನಹರಿಸಿ ಗ್ರಿಲ್ ಮಧ್ಯೆ ಚಿಕ್ಕ ದಾರಿ ಮಾಡಿಕೊಡುವುದರ ಮೂಲಕ ಓಡಾಡಲು ಅವಕಾಶ ಕಲ್ಪಿಸುವಂತೆ ಗ್ರಿಲ್ ಮಧ್ಯೆ ನಿಂತು ಒತ್ತಾಯಿಸಿದ್ದಾರೆ. ಏನಾದರೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದರೇ ಒಂದು ವಾರಗಳ ನಂತರ ಜಿಲ್ಲಾಧಿಕಾರಿ ಕಛೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

​ ​ ​ ​ ​ ​ ಜೆಡಿಎಸ್ ಯುವ ಮುಖಂಡರಾದ ದಸ್ತಾಗೀರ್ ಮತ್ತು ಅಜಾದ್ ಟಿಪ್ಪು ಸುಲ್ತಾನ್ ಅಧ್ಯಕ್ಷ ಮುಬಾಶೀರ್ ಅಹಮದ್ ಮಾಧ್ಯಮದೊಂದಿಗೆ ಮಾತನಾಡಿ, ಅಜಾದ್ ರಸ್ತೆಯಿಂದ ಸೆಂಟ್ ಫಿಲೋಮಿನ ಶಾಲೆಗೆ ಮಕ್ಕಳನ್ನು ಬಿಡಲು ಪೋಷಕರು ಕರೆದೊಯ್ಯಲು ಹೋಗಬೇಕು. ಆದರೇ ಬಿ.ಎಂ. ರಸ್ತೆ, ಬಂದಿಖಾನೆ ಉದ್ದಕ್ಕೂ ಕಬ್ಬಿಣದ ಗ್ರಿಲ್ ಹಾಕಿರುವುದರಿಂದ ಸಮಸ್ಯೆಯಾಗಿದ್ದು, ತುಂಬ ದೂರ ಸುತ್ತಾಡಿಕೊಂಡು ಹೋಗಬೇಕು. ಇದಲ್ಲದೇ ಅಜಾದ್ ರಸ್ತೆಯಿಂದ ಗುಂಡಿ ಹಾಗೂ ಶ್ರೀನಗರಕ್ಕೆ ಹೋಗಲು ಸುವರ್ಣ ಹೋಟೆಲ್ ಬಳಿ ಹೋಗಿ ಸುತ್ತಾಡಿಕೊಂಡು ಬರಬೇಕಾಗಿದೆ. ಇಲ್ಲಿ ಮಸೀದಿ ಕೂಡ ಇದ್ದು, ನಮಾಜಿಗೆ ಬರಲು ಹರಸಾಹಸ ಪಡಬೇಕಾಗಿದೆ ಎಂದರು. ಪ್ರತಿನಿತ್ಯ ಸಾರ್ವಜನಿಕರು ಕಷ್ಟದಲ್ಲಿ ಓಡಾಡಬೇಕಾಗಿದೆ. ಆದ್ದರಿಂದ ನಮಗೆ ವಾಹನ ಓಡಾಡಲು ಅವಕಾಶ ಬೇಡ. ಕೊನೆ ಪಕ್ಷ ಸಾರ್ವಜನಿಕರು ಓಡಾಡಲು ಚಿಕ್ಕ ದಾರಿ ಮಾಡಿಕೊಟ್ಟರೇ ಸಾಕು ನಮಗೆ. ಕೂಡಲೇ ಬಡಾವಣೆಗಳಿಗೆ ಸಂಪರ್ಕಿಸುವ ಮಧ್ಯೆ ಒಡಾಡಲು ದಾರಿ ಮಾಡಿಕೊಡಬೇಕಾಗಿದೆ ಎಂದು ಮನವಿ ಮಾಡಿದ ಅವರು, ಏನಾದರೂ ಇತ್ತ ಕಡೆ ಗಮನಿಸದಿದ್ದರೇ ಇನ್ನೊಂದು ವಾರದಲ್ಲಿ ಡಿಸಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

​ ​ ​ ​ ​ ​ ​ ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ತೌಫಿಕ್ ಪಾಷ, ಕರ್ನಾಟಕ ಕನ್ನಡಿಗರ ಮುಸ್ಲಿಂ ಸಂಘದ ಜಿಲ್ಲಾಧ್ಯಕ್ಷ ಸಯ್ಯಾದ್ ಇಸ್ಮಾಯಿಲ್, ದಿಲ್ಲೂರ್ ಜಮೀಲ್ ಇತರರು ಪಾಲ್ಗೊಂಡಿದ್ದರು.

Post a Comment

0 Comments