ಸಾಲದ ಆಸೆ ತೋರಿಸಿ ಪಂಗನಾಮ

ಸಾಲದ ಆಸೆ ತೋರಿಸಿ ಪಂಗನಾಮ

ಬೇಲೂರು: ಸಾರ್ವಜನಿಕರಿಗೆ ಬ್ಯಾಂಕ್ ಮತ್ತು ಫೈನಾನ್ಸ್‍ನಲ್ಲಿ ಸಾಲ ಕೊಡಿವುದಾಗಿ ನಂಬಿಸಿ ಹಣ ಲಪಟಾಯಿಸುತ್ತಿದ್ದ ಐನಾತಿ ಕಳ್ಳ ಕಡೆಗೂ ಸಿಕ್ಕಿ ಬಿದ್ದಿದ್ದಾನೆ. ಶಿವಮೊಗ್ಗ ಮೂಲದ ಗೋಪಾಲ್ ಬಂಧಿತ ಆರೋಪಿ.
ಈತನಿಂದ 4,47 ಲಕ್ಷ ರೂ. ನಗದು ಸ್ವಿಫ್ಟ್ ಡಿಸೈರ್ ಕಾರು ಮತ್ತು ಜನರಿಂದ ಪಡೆದಿದ್ದ 15 ಲಕ್ಷ ರೂ. ಮೌಲ್ಯದ 8 ಚೆಕ್ ವಶಪಡಿಸಿಕೊಳ್ಳಲಾಗಿದೆ. ತಾಲೂಕಿನ ಹಗರೆ ಶಾಂತಳಾ ನಗರದ ಧರ್ಮಯ್ಯ ಎಂಬುವರು ನಿತ್ಯ ಕಾಫಿ-ಟೀ ಕುಡಿಯಲು ಹಗರೆಗೆ ಹೋಗುತ್ತಿದ್ದರು. ಈ ವೇಳೆ ಖದೀಮ ಗೋಪಾಲ ಪರಿಚಯವಾಗಿದ್ದ. ಈತನ ಪೂರ್ವಪರ ತಿಳಿಯದ ಧರ್ಮಯ್ಯ, ನಾನು ಹೊಸದಾಗಿ ಮನೆ ಕಟ್ಟುತ್ತಿದ್ದು, ಬ್ಯಾಂಕ್ ಅಥವಾ ಫೈನಾನ್ಸ್ ನಿಂದ ಸಾಲ ಬೇಕು ಎಂದು ತಿಳಿಸಿದ್ದರು. ಆದರೆ ಈತ ದೊಡ್ಡ ಖದೀಮ ಎಂದು ಧರ್ಮಯ್ಯಗೆ ತಿಳಿದಿರಲಿಲ್ಲ. ಇದಕ್ಕೆ ಸ್ಪಂದಿಸಿದ ಆಸಾಮಿ ತಾನು ಬೇಲೂರಿನ ಚನ್ನಕೇಶವ ದೇವಾಲಯ ಫೈನಾನ್ಸ್ ಇಟ್ಟುಕೊಂಡಿದ್ದು, ನೀವು ಮನೆ ಕಟ್ಟಲು 10 ಲಕ್ಷ ರೂ, ಸಾಲ ಕೊಡುವುದಾಗಿ ನಂಬಿಸಿದ್ದ.
ಅದರಂತೆ ಜುಲೈ 16 ರಂದು ಧರ್ಮಯ್ಯ ಮನೆಗೆ ಕಾರಿನಲ್ಲಿ ಬಂದ ಆಸಾಮಿ, 
ಬಂದು ಸಿಂಡಿಕೇಟ್ ಬ್ಯಾಂಕ್ ನ 3 ಚೆಕ್ ಗೆ ಸಹಿ ಪಡೆದು ಹಾಗೂ ಮನೆ ದಾಖಲೆ ಪಡೆದು ಹೋಗಿದ್ದ. ನಂತರ ಸಾಲ ಪಡೆಯಬೇಕಾದರೆ 2 ಲಕ್ಷದ ಡಿಡಿ ತೆಗೆಯಬೇಕು ಎಂದು ಅಷ್ಟೂ ಹಣ ಪಡೆದುಕೊಂಡವನೇ ಎಸ್‍ಬಿಐ ಬ್ಯಾಂಕ್ ಮುಂದೆ ಕ್ಯೂ ನಿಂತು ಡಿಡಿ ತೆಗೆಯುತ್ತೇನೆ ಜೊತೆಗೆ ಅಗ್ರಿಮೆಂಟ್ ಪತ್ರ ತರುತ್ತೇನೆಂದು ಹೇಳಿ ಹೋದವನು ನಾಪತ್ತೆಯಾಗಿದ್ದ. ಈ ಸಂಬಂಧ ಧರ್ಮಯ್ಯ  ಸ್ಥಳೀಯ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಶ್ರೀನಿವಾಸ್ ಗೌಡ ಆರೋಪಿ ಪತ್ತೆಗಾಗಿ ಅರಸೀಕೆರೆ ಡಿವೈಎಸ್ಪಿ ನಾಗೇಶ್, ಬೇಲೂರು ಸಿಪಿಐ ಸಿದ್ದರಾಮೇಶ್ವರ್, ಪಿಎಸೈ ಅಜಯ್ ಕುಮಾರ್ ನೇತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. ಸದರೀ ಆರೋಪಿ ಇದೇ ರೀತಿ ಅನೇಕರಿಗೆ ವಂಚಿಸಿರಬಹುದು ಎಂಬ ಅನುಮಾನದ ಮೇರೆಗೆ ವಿಶೇಷ ತಂಡ ಆರೋಪಿಯ ಚಹರೆ ಮತ್ತು ವಿಳಾಸ ಸಂಗ್ರಹಿಸಿ ಕಾರ್ಯಾಚರಣೆ ಚುರುಕುಗೊಳಿಸಿತ್ತು.  
ಚಾಲಾಕಿ ವಂಚಕ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಬಸ್ ನಿಲ್ದಾಣದ ಬಳಿ 
ಇರುವ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿದ ತಂಡ ಜು. 29 ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ನಂತರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಗೋಪಾಲ ವಂಚನೆಯ ಪುರಾಣ ಬಯಲಾಗಿದೆ. 

ಹಲವರಿಗೆ ಪಂಗನಾಮ:
ಗುತ್ತಿಗೆದಾರನ ಕೆಲಸ ಮಾಡುತ್ತಿದ್ದ ಆರೋಪಿ ಬೇಲೂರು ಠಾಣೆ ವ್ಯಾಪ್ತಿಯಲ್ಲಿ ಎರಡು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1, ತುಮಕೂರು ಜಿಲ್ಲೆ ಹಂದನ ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1,  ತಿಪಟೂರಿನಲ್ಲಿ 1 ಸೇರಿ ಒಟ್ಟು 5 ಪ್ರಕಣದಲ್ಲಿ ಲಕ್ಷಾಂತರ ಹಣಕ್ಕೆ ಪಂಗನಾಮ ಹಾಕಿದ್ದಾನೆ. ಕಾರ್ಯಾಚರಣೆ ನಡೆಸಿದ ತಂಡವನ್ನು ಎಸ್ಪಿ ಅಭಿನಂದಿಸಿದ್ದಾರೆ.

Post a Comment

0 Comments