ಇಂದು ಮತ್ತೆ 101 ಪಾಸಿಟಿಸ್ ಕೇಸ್ ಪತ್ತೆ 1 ಸಾವು

ಇಂದು 101 ಕೋವಿಡ್ ಪ್ರಕರಣ ಪತ್ತೆ, 20ಮಂದಿ ಬಿಡುಗಡೆ, ಒಟ್ಟು 2131ಮಂದಿ ಸೋಂಕಿತರು: ಡಿಹೆಚ್ ಓ ಡಾ ಸತೀಶ್
ಹಾಸನ ಜಿಲ್ಲೆಯಲ್ಲಿ ಇಂದು ಹೊಸದಾಗಿ 101 ಕೋವಿಡ್-19
ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಇಂದು 1 ಸಾವು
ಸಂಭವಿಸಿದೆ ಅದರೊಂದಿಗೆ ಸೋಂಕಿತರ ಸಂಖ್ಯೆ 2131 ಕ್ಕೆ
ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.
ಇದುವರೆಗೆ 921 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ
ಬಿಡುಗಡೆಯಾಗಿದ್ದು, 1149 ಸಕ್ರಿಯ ಸೋಂಕಿತರು ಕೋವಿಡ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಒಟ್ಟು 61
ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು
ಅವರು ತಿಳಿಸಿದರು. ಕೋವಿಡ್-19 ಉಲ್ಬಣವಾಗುತ್ತಿರುವ
ಹನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ
ಅಂತರ ಕಾಯ್ದುಕೊಳ್ಳುವ ಮೂಲಕ ಕರೋನಾ ಸೋಂಕು
ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಡಾ|| ಸತೀಶ್
ಹೇಳಿದರು.

Post a Comment

0 Comments