ರೈತರನ್ನು ದಾರಿ ತಪ್ಪಿಸುವ ಕೆಲಸಶಾಸಕ ಕೆಎಂಶಿ ವಿರುದ್ಧ ಮರಿಸ್ವಾಮಿ ಆಕ್ರೋಶ

ರೈತರನ್ನು ದಾರಿ ತಪ್ಪಿಸುವ ಕೆಲಸ
ಶಾಸಕ ಕೆಎಂಶಿ ವಿರುದ್ಧ ಮರಿಸ್ವಾಮಿ ಆಕ್ರೋಶ

ಅರಸೀಕೆರೆ: ಎಲ್ಲೆಡೆ ಕೊರೊನಾ ಮಹಾಮಾರಿಯಿಂದ ಜನರು ಪರಿತಪಿಸುತ್ತಿದ್ದು,
ಕ್ಷೇತ್ರದ ಶಾಸಕರು ಪ್ರತಿಭಟನೆ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮರಿಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಫೆಡ್ ಕೇಂದ್ರದ ಮೂಲಕ ರೈತರಿಂದ ಕೊಬ್ಬರಿ ಖರೀದಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಸದ್ಯದಲ್ಲೇ ಸಹಾಯಧನ ಬಿಡುಗಡೆ ಮಾಡಲಿದೆ. ಆದರೂ ಶಾಸಕ ಶಿವಲಿಂಗೇಗೌಡ ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಸಿಎಂ ಯಡಿಯೂರಪ್ಪ ಅವರು ರೈತರ ಹೆಸರಿಲ್ಲಿ ಪ್ರಮಾಣ ವಚನ ಸ್ವೀಕರಿಸಿದಂತೆ ಮಣ್ಣಮಕ್ಕಳ ಪರ ಕಾಳಜಿಯುಳ್ಳವರಾಗಿದ್ದಾರೆ. ಇಂದಲ್ಲ ನಾಳೆ ರೈತರಿಗೆ ಬೆಂಬಲ ಬೆಲೆ ನೀಡಲಿದ್ದಾರೆ. ಆದರೂ ಕೂಡ ಸ್ಥಳೀಯ ಶಾಸಕರು ಜನತೆಯಲ್ಲಿ ತಪ್ಪು ಭಾವನೆ ಬಿತ್ತುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕಳೆದ ಭಾನುವಾರ ಲಾಕ್‍ಡೌನ್ ಇದ್ದರೂ ಶಾಸಕರು ಸರ್ಕಾರಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಸಹಕಾರ ಸಂಘ ನೀಡುವ ಚೆಕ್ ಗಳನ್ನು ಇವರೇ ವಿತರಣೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆಪಾದಿಸಿದರು. ಇದರ ವಿರುದ್ಧ ತಹಸೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪ ಅವರು ಯಾವತ್ತೂ ರೈತರಿಗೆ ಅನ್ಯಾಯ ಎಸಗಿಲ್ಲ. 
ತಾವೂ ಕೂಡ ಈಗಾಗಲೇ ಯಡಿಯೂರಪ್ಪ ಅವರ ಜೊತೆ ಚರ್ಚಿಸಿದ್ದು ನ್ಯಾಫೆಡ್ 
ಕೇಂದ್ರ ಮೂಲಕ ಕೊಬ್ಬರಿ ಖರೀದಿ ಮಾಡುವ ರೈತರಿಗೆ ಸಹಾಯಧನ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೂ ವಿನಾಕಾರಣ ರೃತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರೇ ಉತ್ತಮ ಪಾಠ ಕಲಿಸಲಿದ್ದಾರೆ ಎಂದರು.
ವರ ಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ವ್ಯಾಪಾರ ವಹಿವಾಟು ಬಂದ್ ಮಾಡುವ ಬದಲು ಸಂಜೆ  6 ರವರೆಗೊ ವಿಸ್ತರಿಸಲು ತಹಸೀಲ್ದಾರ್ ಸಂತೋಷ್ ಕುಮಾರ್ ಅವರೊಂದಿಗೆ ಮಾತನಾಡಿ ಮರಿಸ್ವಾಮಿ ಸಡಿಲಗೊಳಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಪುರುμÉೂೀತ್ತಮ. ಕೆ.ವಿ.ಎನ್.ಶಿವು. ಆಕಾಶ್ ಹಿರಿಯಪ್ಪ, ಅಣ್ಣನಾಯಕನಹಳ್ಳಿ ವಿಜಯ ಕುಮಾರ್, ರಮೇಶ್ ನಾಯ್ಡು. ಯುವÀ ಮೋರ್ಚಾ ಅಧ್ಯಕ್ಷ ಯಾದಾಪುರ ತೇಜಸ್ಸ್, ಎಪಿಎಂಸಿ ನಾಮ ನಿರ್ದೇಶನ ಸದಸ್ಯ ಮಹಾಲಿಂಗಪ್ಪ, ಕೆಂಪಸಾಗರ ಶಿವರಾಜ್, ಲಾಳನಕೆರೆ ಯೋಗೀಶ್ ಇದ್ದರು.

Post a Comment

0 Comments