ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ‌ ಆ.11ರಂದು ಬೃಹತ್ ಪ್ರತಿಭಟನೆ

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ‌ ಆ.11ರಂದು ಬೃಹತ್ ಪ್ರತಿಭಟನೆ



ದಲಿತ ಸಂಘಟನೆಗಳಿಂದ ಒಕ್ಕೊರಲಿನಿಂದ ತೀರ್ಮಾನ

ಹಾಸನ: ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರದತಂಹ ಪ್ರಕರಣ ಖಂಡಿಸಿ ಆಗಸ್ಟ್ 11ರಂದು ಹಾಸನದಲ್ಲಿ ಬೃಹತ್ ಪ್ರತಿಭಟನೆ ಮಾಡಲು ದಲಿತ ಸಂಘಟನೆಗಳು ಒಕ್ಕೊರಲಿನಿಂದ ತೀರ್ಮಾನ ಮಾಡಿವೆ.

ನಗರದ ಮಾನವ ಬಂಧುತ್ವ ವೇದಿಕೆ ಸಂಭಾಂಗಣದಲ್ಲಿ  ಕರೆಯಲಾಗಿದ್ದ ಜಿಲ್ಲಾಮಟ್ಟದ ದಲಿತ ಮುಖಂಡರ‌ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಕಳೆದ  7 ತಿಂಗಳಲ್ಲಿ ಜಿಲ್ಲೆಯಲ್ಲಿ 103 ವಿವಿಧ ಪ್ರಕರಣಗಳು ನಡೆದಿದ್ದು ಆತಂಕಕಾರಿ ಬೆಳವಣಿಗೆ. ಸಮಾಜ ಎಷ್ಟೇ ಮುಂದುವರೆದರೂ  ದಲಿತರು ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ದಲಿತ ಸಂಘಟನೆಗಳು ಪ್ರತಿಭಟನೆಗಳ ಮೂಲಕ ಎಷ್ಟೇ ಗಮನ ಸೆಳೆದರು ಸರ್ಕಾರ ಸ್ಪಂದಿಸುತ್ತಿಲ್ಲ.ಕೊರೋನಾ‌ ಒಂದು ‌ಕಡೆ ಜನರನ್ನು ಹಿಂಸಿಸುತ್ತಿದ್ದರೆ ಜನರೇ ದಲಿತರನ್ನು ಹಿಂಸೆ‌ ಮಾಡುವ ಮೂಲಕ ಅಮಾನವೀಯವಾಗಿ‌ ನಡೆದುಕೊಳ್ಳುತ್ತಿದ್ದಾರೆ. ದಲಿತ ಸಂಘಟನೆಗಳು ‌ಇಂತಹ‌‌ ದೌರ್ಜನ್ಯ ದಬ್ಬಾಳಿಕೆ ಯನ್ನು  ಸಹಿಸುವುದಿಲ್ಲ  ಎಂದು‌ ಸಭೆಯಲ್ಲಿದ್ದ‌  ಹಿರಿಯ ಮುಖಂಡರಾದ ಹೆಚ್.ಕೆ.ಸಂದೇಶ್, ಈರಪ್ಪ, ಪುಟ್ಟರಾಜ್ ,ಹೆತ್ತೂರ್ ನಾಗರಾಜ್ , ಬ್ಯಾಂಕ್ ಶಿವಣ್ಣ,ಸೋಮಶೇಖರ್ , ಆರ್ .ಪಿ. ಐ. ಸತೀಶ್ ಮುಖಂಡರು ಸಮಾಜವನ್ನು‌ ಎಚ್ಚರಿಸಿ ಪ್ರತಿಭಟನೆಗೆ‌ ಬೆಂಬಲ‌ ಸೂಚಿಸಿದರು.

ಆಲೂರು‌ ಹಾಗೂ‌ ಸಕಲೇಶಪುರ ತಾಲ್ಲೂಕಿನಲ್ಲಿ‌  ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಕಲಗೂಡು   ಪ್ರಕರಣಕ್ಕೆ  ‌‌ನ್ಯಾಯವೇ ಸಿಗಲಿಲ್ಲ. ಮೊನ್ನೆ ‌ಮೊನ್ನೆ ಆಲೂರು‌ ತಾಲ್ಲೂಕಿನ ‌‌ನಡೆದು‌ ಶೂಟ್ ಔಟ್ ಪ್ರಕರಣ ಒಂದು ಮಾರ್ಯಾಧ್ಯ ಹತ್ಯೆಯಾಗಿದೆ.‌ದಲಿತರು ಬಂದೂಕು‌ ಹಿಡಿದರೆ ಬೇರೆ ಅರ್ಥ ಕಲ್ಪಿಸುತ್ತಾರೆ. ಆದರೆ ಸವರ್ಣಿಯರಿಗೆ ನೀಡಿರುವ ಬಂದೂಕುಗಳು ದಲಿತರ ಹತ್ಯೆಗೆ ಬಳಕೆಯಾಗುತ್ತಿರುವುದು  ನಾಗರೀಕ‌ ಸಮಾಜ‌ ತಲೆತಗ್ಗಿಸುವ ವಿಚಾರಚಾಗಿದೆ  ಇಂತಹ ಪ್ರಕರಣಗಳು ಎದುರಾದಾಗ  ದಲಿತರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮರಿಜೋಸೆಫ್, ದಂಡೋರ‌ ವಿಜಯ್‌ಕುಮಾರ್, ಹೇಮೇಶ್,ಸ್ಟೀವನ್ ಪ್ರಕಾಶ್ ,ಜಗದೀಶ್ ಔಡಹಳ್ಳಿ ಲಕ್ಷಣಕೀರ್ತಿ,‌ಶಿವಮ್ಮ,ಭಾಗ್ಯಕಲೀವೀರ್  ಸಭೆಯ ಗಮನ ಸೆಳೆದರು.
ಆಲೂರು,ಸಕಲೇಶಪುರ ‌ತಾಲ್ಲೂಕಿನಲ್ಲಿ ಪ್ರಕರಣಗಳು ಹೆಚ್ಚಾಗಿದ್ದರೂ ಮೀಸಲಾತಿ‌ ಕ್ಷೇತ್ರದಲ್ಲಿ ‌ಅಧಿಕಾರ ಅನುಭವಿಸುತ್ತಿರುವ ಹೆಚ್.ಕೆ. ಕುಮಾರಸ್ವಾಮಿ‌ ದಲಿತರ ಪರ ನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ.‌ಕನಿಷ್ಟ‌ ನೊಂದ ಕುಟುಂಬಕ್ಕೆ ಸಾಂತ್ವನ‌ಹೇಳಿಲ್ಲ . ಇನ್ನು ಗ್ರಾಪಂ, ಜಿಪಂ ಕೆಲವು ಸಮುದಾಯದ ಮುಖಂಡರು ನೊಂದ ‌ಕುಟುಂಬದವರ ದಾರಿ ತಪ್ಪಿಸಿ  ದಲಿತರ ಹೋರಾಟ ಹತ್ತಿಕ್ಕುವ ಪ್ರಯತ್ನ‌‌ಮಾಡುತ್ತಿದ್ದಾರೆ ಎಂದು‌ ಆರ್‌ಪಿ ಐ ಸತೀಶ್ ಗಂಬೀರ ಆರೋಪ‌ ಮಾಡಿದರು.‌ಇದಕ್ಕೆ‌ಸಭೆಯಲ್ಲಿದ್ದ ಬಹುತೇಕ ಮುಖಂಡರು  ಶಾಸಕರ‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ಜಿಲ್ಲೆಯಿಂದ ನೂರಾರು ದಲಿತ ಮುಖಂಡರು‌ ಆಗಮಿಸಿ ಆಯಾಯ ತಾಲ್ಲೂಕಿನ ‌ಸಮಸ್ಯೆಗಳನ್ನು‌ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿದ್ದ‌ ಹಿರಿಯ ಮುಖಂಡರು ಎಲ್ಲಾ ಸಮಸ್ಯೆಗಳಿಗೆ ಪ್ರತಿಭಟನೆ ಮೂಲಕ‌ ಸರ್ಕಾರದ ಗಮನ‌ ಸೆಳೆದು ನ್ಯಾಯ ಸಿಗುವವರಗೆ    ಹೋರಾಟ ‌ಮಾಡಲು ಸಲಹೆ ನೀಡಿದರು. ಹಿರಿಯ ದಲಿತ‌ ಮುಖಂಡ ಹೆಚ್.ಕೆ.ಸಂದೇಶ್ ಮಾತನಾಡಿ ದಲಿತರಿಗೆ ರಕ್ಷಣೆ ನೀಡಲು ಜಿಲ್ಲಾಡಳಿತ ಮುಂದಾಗಬೇಕು. ಪೊಲೀಸ್ ಇಲಾಖೆ ರಕ್ಣಣೆ‌‌ ಕೊಡಲು ಮುಂದಾಗಬೇಕು.‌ಇವೆಲ್ಲದರ ನಡುವೆ ದಲಿತ ಮುಖಂಡರ ಸಭೆ ‌ಕರೆದು ಸಮಸ್ಯೆಗಳ‌ ಬಗ್ಗೆ ಚರ್ಚಿಸಿ ದಲಿತ ಸಮುದಾಯಕ್ಕೆ ಧೈರ್ಯ ತುಂಬಬೇಕಾಗಿದೆ ಎಂದು ಆಗ್ರಹಿಸಿ ಆ.11ರಂದು ನಡೆಯುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಪಾಲ್ಗೊಂಡು ಸಾಮಾಜಿ ಅಂತರದೊಂದಿಗೆ  ಹೋರಾಟ ಯಶಸ್ವಿಗೊಳಿಸಬೇಕು ಎಂದು ಮನವಿ  ಮಾಡಿದರು.

Post a Comment

0 Comments