ಹಾಸನ : ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಯುವಕನನ್ನು ಕಿಡ್ನಾಪ್ ಮಾಡಿರುವ ಘಟನೆ ಹಾಸನ ಹೊಯ್ಸಳ ನಗರದಲ್ಲಿ ನಡೆದಿದೆ.
ಕಿಡ್ನಾಪ್ ಆಗಿ ನಾಲ್ಕು ದಿನ ಕಳೆದರೂ ಲಿಖಿತ್‌ಗೌಡ (26) ಸುಳಿವು ಪತ್ತೆಯಾಗಿಲ್ಲ. ಕಳೆದ ಏಳು ತಿಂಗಳ ಹಿಂದೆಯಷ್ಟೇ ನಿಖಿತ್ ವಿವಾಹವಾಗಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದು, ನಗರದ ಬಡಾವಣೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹಾಸನದಲ್ಲಿ A to z ಎಂಬ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ಗೌಡ, ಅಲ್ಲಿಗೆ ಟ್ಯಾಂಕರ್ ಸರ್ವಿಸ್‌ಗೆ ಬರುತ್ತಿದ್ದ ಚಾಲಕ ಸಾಗರ್ ನೊಂದಿಗೆ ಸ್ನೇಹ ಬೆಳೆದಿದ್ದು, ಈ ವೇಳೆ ಲಿಖಿತ್‌ಗೌಡನಿಂದ ಸಾಗರ್ 2.5 ಲಕ್ಷ ರೂ. ಸಾಲ ಪಡೆದಿದ್ದ. ಹಣ ವಾಪಾಸ್ ಕೇಳಿದ್ದ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ಸಾಗರ್ ಗೆ ಸೇರಿದ ಸ್ಕೂಟರ್ ತೆಗೆದುಕೊಂಡು ಬಂದಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಪುನಃ ಜಗಳ ನಡೆದಿತ್ತು.
ಫೆ.5 ರಂದು ಸಂಜೆ 6.30 ಸುಮಾರಿಗೆ ಹಣ ಕೊಡುವುದಾಗಿ ಸಾಗರ್ ಹಾಗೂ ನವೀನ್ ಎಂಬುವವರು
ಕೆಎ-41-ಎಂಎ-9231 ನಂಬರ್‌ನ
ಓಮಿನಿ ಕಾರಿನಲ್ಲಿ ಬಂದು ಲಿಖಿತ್‌ಗೌಡನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ಅಂದಿನಿಂದ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದ ಆತಂಕಗೊಂಡಿರುವ ಲಿಖಿತ್‌ಗೌಡ ಪತ್ನಿ ಹಾಗೂ ಪೋಷಕರು ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲು ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 Comments