ಟಿಕೆಟ್ ಕುತೂಹಲದ ನಡುವೆ ಸೋಲು-ಗೆಲುವಿನ ಲೆಕ್ಕಾಚಾರ

ಟಿಕೆಟ್ ಕುತೂಹಲದ ನಡುವೆ ಸೋಲು-ಗೆಲುವಿನ ಲೆಕ್ಕಾಚಾರ


ಹಾಸನ ಕ್ಷೇತ್ರದ ಟಿಕೆಟ್ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದ ಬೆನ್ನಲ್ಲೇ, ಇದೀಗ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ತೀವ್ರ ಕುತೂಹಲದ ಜೊತೆಗೆ ಸೋಲು-ಗೆಲುವಿನ ಲೆಕ್ಕಾಚಾರವೂ ಆರಂಭವಾಗಿದೆ.
ಜೆಡಿಎಸ್ ಅಂತಿಮವಾಗಿ ಮಾಜಿ ಶಾಸಕ ದಿ.ಹೆಚ್.ಎಸ್.ಪ್ರಕಾಶ್ ಅವರ ಪುತ್ರ ಹೆಚ್.ಪಿ.ಸ್ವರೂಪ್ ಅವರಿಗೆ ಟಿಕೆಟ್ ನೀಡಿದರೆ, ರೇವಣ್ಣ ಅವರ ಇಡೀ ಕುಟುಂಬ ಸ್ವರೂಪ್ ಅವರ ಪರ ನಿಲ್ಲುತ್ತದೆಯೋ..? ಗೆಲುವಿಗಾಗಿ ಪ್ರಮಾಣಿಕವಾಗಿ ಶ್ರಮಿಸುತ್ತದೆಯೇ ಎಂಬ ಸಹಜವಾದ ಪ್ರಶ್ನೆ ಇದೀಗ ಕ್ಷೇತ್ರದಲ್ಲಿ ಎದ್ದಿದೆ. ಟಿಕೆಟ್ ಗೊಂದಲ ಬೂದಿ ಮುಚ್ಚಿದ ಕೆಂಡದAತಿದ್ದು, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರದತ್ತ ಎಲ್ಲರ ಗಮನ ನೆಟ್ಟಿದೆ.
ಒಂದು ವೇಳೆ ಹಠಕ್ಕೆ ಬಿದ್ದು ಭವಾನಿ ರೇವಣ್ಣ ಅವರೇ ಟಿಕೆಟ್ ಪಡೆದರೆ ಸ್ವರೂಪ್ ಅವರು ಭವಾನಿ ರೇವಣ್ಣ ಅವರ ಪರ ಮನಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡುತ್ತಾರೆಯೋ..? ಸ್ವಾಭವಿಕವಾಗಿ ಕ್ಷೇತ್ರದಲ್ಲಿ ಎದುರಾಗುವ ರಾಜಕೀಯ ಟೀಕೆಗಳನ್ನು ರೇವಣ್ಣ ಅವರ ಕುಟುಂಬ ಎಷ್ಟರ ಮಟ್ಟಿಗೆ ಸರಿದೂಗಿಸುತ್ತದೆ ಎಂಬ ಮಾತುಗಳು ಚರ್ಚೆಯಾಗುತ್ತಿವೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬAತೆ ಭವಾನಿ ರೇವಣ್ಣ- ಹೆಚ್.ಪಿ.ಸ್ವರೂಪ್ ನಡುವೆ ಟಿಕೆಟ್‌ಗಾಗಿ ನಡೆಯುತ್ತಿರುವ ಕಿತ್ತಾಟದ ನಡುವೆ ಪ್ರೀತಂಜೆ.ಗೌಡರಿಗೆ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂಬ ಮಾತುಗಳೂ ಕೇಳಿ ಕೇಳಿಬರುತ್ತಿವೆ. 
ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್‌ಗಾಗಿ ಪಕ್ಷದೊಳಗಿನ ಆಂತರಿಕ ಕಲಹ, ತಾನೇ ಅಭ್ಯರ್ಥಿ ಎಂಬ ಸ್ವಯಂ ಘೋಷಣೆ, ನಾನೂ ಪ್ರಬಲ ಆಕಾಂಕ್ಷಿ ಎಂಬ ಹೇಳಿಕೆ, ಪರ-ವಿರೋಧ ಪ್ರತಿಭಟನೆ, ಕಳೆದೊಂದು ವಾರದಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿರುವ ಮತದಾರರ ಒಲವು ಯಾರತ್ತ ವಾಗುತ್ತದೆ? ಪ್ರತಿಪಕ್ಷಗಳು ಹೇಗೆಲ್ಲ ರಾಜಕೀಯ ದಾಳ ಉರುಳಿಸಬಹುದು ಎಂಬ ಕೌತುಕ ಹಾಸನ ಕ್ಷೇತ್ರದಲ್ಲಿ ಹೆಚ್ಚಾಗಿದೆ.
ಸ್ವರೂಪ್ ಅವರು ಅಂತಿಮವಾಗಿ ಅಭ್ಯರ್ಥಿಯಾದರೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಆಕಾಂಕ್ಷಿ ಭವಾನಿ ರೇವಣ್ಣ ಅವರ ನಡೆ ಹೇಗಿರುತ್ತದೆ. ಒಗ್ಗಟ್ಟು ಪ್ರದರ್ಶಿಸಿ ಗೆಲುವಿ ಆರ್ಥಿಕವಾಗಿ, ಸಂಘಟನಾತ್ಮಕವಾಗಿ ಬಲ ತುಂಬುತ್ತಾರೆಯೇ ಎಂಬ ಬಹುದೊಡ್ಡ ಪ್ರಶ್ನೆಯ ಜೊತೆಗೆ ಹಾಸನ ಕ್ಷೇತ್ರವನ್ನು ಕೈ ಚೆಲ್ಲಿ ನೆಪಮಾತ್ರಕ್ಕೆ ಓಡಾಟ ನಡೆಸೂತ್ತಾರೋ ಎಂಬ ಅನುಮಾನವೂ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ. 

ಸ್ವರೂಪ್ ಪರ ಜನರ ಒಲವು:
ಕ್ಷೇತ್ರದಲ್ಲಿ ಬಹುತೇಕ ಜನರು ಹೆಚ್.ಪಿ.ಸ್ವರೂಪ್ ಅವರು ಅಭ್ಯರ್ಥಿಯಾದರೆ ಬಿಜೆಪಿ ಹಾಲಿ ಶಾಸಕ ಪ್ರೀತಂ ಜೆ.ಗೌಡ ಅವರಿಗೆ ಪ್ರಬಲ ಪೈಪೋಟಿ ನೀಡಬಹುದು. ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಇಡೀ ಕುಟುಂಬ ಸ್ವರೂಪ್ ಅವರ ಪರ ಕೆಲಸ ಮಾಡಿದರೆ ಗೆಲುವು ಸುಲಭವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭವಾನಿ ರೇವಣ್ಣ ಅವರು ಅಭ್ಯರ್ಥಿಯಾದರೆ ಸ್ವರೂಪ್ ಅವರಿಗೆ ಟಿಕೆಟ್ ತಪ್ಪಿಸಿದ ಅಪವಾರದ ಜೊತೆಗೆ ಪ್ರತಿಪಕ್ಷಗಳ ಟೀಕೆಗಳನ್ನೂ ಎದುರಿಸಬೇಕಾಗುತ್ತದೆ. 

ರೇವಣ್ಣ ಅವರಿಗೆ ಆಹ್ವಾನ: 
ಟಿಕೆಟ್ ಗೊಂದಲು, ಟೀಕೆಗಳಿಗೆ ತೆರೆ ಎಳೆದು ಶಾಸಕ ಪ್ರೀತಂ ಜೆ.ಗೌಡ ಅವರ ಸವಾಲು ಎದುರಿಸಬೇಕಾದರೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರವನ್ನು ಭವಾನಿ ರೇವಣ್ಣ ಅವರಿಗೆ ಬಿಟ್ಟುಕೊಟ್ಟು, ಹಾಸನ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಹೆಚ್.ಡಿ.ರೇವಣ್ಣ ಅವರು ಸ್ಪರ್ಧಿಸಿದೆ ಜೆಡಿಎಸ್ ಕೈ ತಪ್ಪಿರುವ ಹಾಸನ ಕ್ಷೇತ್ರವನ್ನು ಮರಳಿ ಪಡೆಯಬಹುದು. ಅಲ್ಲದೆ ಆಕಾಂಕ್ಷಿ ಹೆಚ್.ಪಿ.ಸ್ವರೂಪ್ ಅವರ ಅಸಮಾಧಾನವನ್ನೂ ಶಮನ ಮಾಡಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.  

ಮುಂದುವರೆದ ಕ್ಷೇತ್ರ ಸಂಚಾರ:
ಕ್ಷೇತ್ರದಲ್ಲಿ ನಿರಂತರವಾಗಿ ಸಂಚಾರ ಆರಂಭಿಸಿರುವ ಭವಾನಿ ರೇವಣ್ಣ ಅವರು ನಿತ್ಯವೂ ಒಂದಲ್ಲೊAದು ಕಾರ್ಯಕ್ರಮಗಳಲ್ಲಿ ಭಾಗಹಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ನಿತ್ಯವೂ ಜಿಲ್ಲಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಅವರು ಸಂಸದರ ನಿವಾಸದಲ್ಲಿ ಕಾರ್ಯಕರ್ಯರು, ಮುಖಂಡರೊAದಿಗೆ ಚರ್ಚೆ ನಡೆಸುತ್ತಿದ್ದಾರೆ. ಸೋಮವಾರವೂ ಹೆಚ್ಚು ಸಮಯ ಸಂಸದರ ನಿವಾಸದಲ್ಲಿದ್ದ ರೇವಣ್ಣ ಅವರು ಕ್ಷೇತ್ರ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಇನ್ನು ಸ್ವರೂಪ್ ಅವರು ಕೂಡ ಗ್ರಾಮಾಂತರ ಭಾಗಗಳಲ್ಲಿ ಸಂಚರಿಸುತ್ತಿದ್ದಾರೆ. ಸೋಮವಾರ ತಾಲ್ಲೂಕಿನ ಸೀಗೆ, ದೇವಿಹಳ್ಳಿ, ಕಕ್ಕೇಹಳ್ಳಿ, ವೀರಾಪುರ, ಕಲ್ಲುದೇವರಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಬಿಜೆಪಿ ಮುಖಂಡರು, ಯುಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

Post a Comment

0 Comments