ಬೇಲೂರು ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಮೊ ನಂ ೨೫೨/೨೦೨೨ ಕಲಂ : ೪೫೭.೩೮೦ ಐಪಿಸಿ ಮತ್ತು ೨೫೩/೨೦೨೧ ಕಲಂ ೪೫೭ ೩೮೦ ಐಪಿಸಿ ಪ್ರಕರಣದಲ್ಲಿ ಆರೋಪಿಗಳು ಮನೆಕಳ್ಳತನ ಮಾಡಿದ ಬಗ್ಗೆ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಎಸ್ ಪಿ ಶ್ರೀನಿವಾಸಗೌಡ ಆರ್, ಐಪಿಎಸ್ ರವರ ಹಾಗು ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ಕೆ.ಎಸ್.ಪಿ.ಎಸ್ ರವರ ಹಾಗೂ ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ಅಶೋಕ ಡಿ ರವರ ಮಾರ್ಗದರ್ಶನದಲ್ಲಿ, ಬೇಲೂರು ಪೋಲಿಸ್ ಠಾಣಾ ನೀರೀಕ್ಷಕ ಯೋಗೇಶ ಕೆ.ಎಂ, ಅವರ ನೇತೃತ್ವದಲ್ಲಿ ಪಿಎಸ್ ಐ ರವರಾದ ಶಿವನಗೌಡ ಜಿ ಪಾಟೀಲ್ ಹಾಗೂ ಸಿಬ್ಬಂದಗಳಾದ ಹೆಚ್ ಸಿ ೮೫ ತಾಂಡವೇಶ್ವರ್. ಪಿಸಿ ೨೨೩ ಶಿವಾನಂದ್, ಪಿಸಿ ೩೦೯ ಚೇತನ, ಪಿಸಿ ೨೦೯ ಉಮೇಶ್ ಮತ್ತು ಜಿಲ್ಲಾ ಪೋಲಿಸ್ ಕಛೇರಿಯ ಫೀರ್ಖಾನ್ ರವರುಗಳನ್ನು ಒಳಗೊಂಡ ತಂಡ ರಚಿಸಿ ಅಪರಾಧ ಪತ್ತೆ ಬಗ್ಗೆ ನೇಮಿಸಿದ್ದು, ಅದರಂತೆ ಇವರುಗಳು ಆರೋಪಿಗಳಾದ ೨ ಮಾರುತಿ ಬಿನ್ ಲೇ.ದುರ್ಗಪ್ಪ ೩೯ ವರ್ಷ ಕೊರಚ ಜನಾಂಗ, ಚಿಕ್ಕಬೆನ್ನೂರು ಗ್ರಾಮ ಅಂಚೆ, ಸಂತೆಬೆನ್ನೂರು ಹೋಬಳಿ, ಚೆನ್ನಗಿರಿ ತಾ. ದಾವಣಗೆರೆ ಜಿಲ್ಲೆ, ೨. ಅಶೋಕ ಬಿನ್ ಲೇ. ರಾಮಪ್ಪ ೪೦ ವರ್ಷ ಕೊರಚ ಜನಾಂಗ ಚಿಕ್ಕಬೆನ್ನೂರು ಗ್ರಾಮ ಅಂಚೆ. ಸಂತೆಬೆನ್ನೂರು ಹೋಬಳಿ, ಚೆನ್ನಗಿರಿ ತಾಲ್ಲೂಕು, ದಾವಣಿಗೆರೆ ಜಿಲ್ಲೆ ರವರನ್ನು ದಸ್ತಗಿರಿ ಮಾಡಿ ರೂ ೪.೭೦.೦೦೦ ಬೆಲೆಬಾಳುವ ೧೦೦ ಗ್ರಾಂ ಚಿನ್ನದ ಆಭರಣಗಳನ್ನು ವಶ ಪಡಿಸಿಕೊಂಡಿದ್ದು, ಈ ಬಗ್ಗೆ ಎಸ್ ಪಿ ಅಪರಾಧ ಪತ್ತೆ ಕಾರ್ಯದಲ್ಲಿ ಬಾಗಿಯಾದ ಅಧಿಕಾರಿ ಸಿಬ್ಬಂದಿಯನ್ನು ಶ್ಲಾಘನೀಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ತರಬೇತಿ ದ್ವಾರಿಕ ಕೆ ನಾಯ್ಕ್ ಮತ್ತು ಎಎಸ್ ಐ ನಾಗರಾಜು ಹಾಜರಿದ್ದರು.
0 Comments