ಉತ್ತಮ ರಸ್ತೆಗೆ ಡಾಂಬರೀಕರಣ ಪ್ರಜ್ವಲ್ ರೇವಣ್ಣ ಆಕ್ರೋಶ


ಹಾಸನ ಒಂದು ಗುಂಡಿ ಇಲ್ಲದಿದ್ದರೂ ಚನ್ನಾಗಿರುವ ರಸ್ತೆಯನ್ನು ಹಗೆದು 
ರಸ್ತೆ ಮಾಡುವ ಉದ್ದೇಶ ಏನಿದೆ, ಇದು ದುಡ್ಡು ಮಾಡಲು ಅನಗತ್ಯ ಕಾಮಗಾರಿ 
ಮಾಡಲಾಗುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿ ಕಿಡಿಕಾರಿದರು. 
ಆರ್.ಸಿ. ರಸ್ತೆ, ಜಿಲ್ಲಾ ಪೊಲೀಸ್ ವ-
ರಿಷ್ಠಾಧಿಕಾರಿ ಕಛೇರಿ ಪಕ್ಕದಲ್ಲಿ ನೀಡಲಾಗಿರುವ 
ಸಂಸದರ ನಿವಾಸದ ಮುಂದೆ ಗುಂಡಿ ಇಲ್ಲವಾ 
ದರೂ 30 ಮೀಟರ್ ರಸ್ತೆ ಅಗೆದಿದ್ದಾರೆ ರಸ್ತೆ 
ಅಗೆದಿರುವ ಬಗ್ಗೆ ಸ್ಥಳಿಯ ನಗರಸಭೆ ಸದಸ್ಯರು 
ಇಂಜಿನಿಯರ್ ನಗರಸಭೆ ಆಯುಕ್ತರಿಗೆ ಮಾಹಿತಿ 
ಇಲ್ಲವೇ ಎಂದು ಪ್ರಶ್ನೆ ಮಾಡಿದರು. ಸ್ಥಳಕ್ಕೆ ಅಪರ 
ಜಿಲ್ಲಾಧಿಕಾರಿ ಕವಿತರಾಜರಾಂ, ನಗರಸಭೆ ಆಯುಕ್ತ 
ಕೃಷ್ಣಮೂರ್ತಿ ಆಗಮಿಸಿ ಸಂಸದರ ಜೊತೆ ರಸ್ತೆ ವೀಕ್ಷಣೆ ಮಾಡಿ ವಿವರ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಇಂತಹ ಕಾಮಗಾರಿ 
ನೋಡಿದರೇ ಸರ್ವಾಧಿಕಾರಿಯಂತೆ ಕಾಣುತ್ತದೆ. ಅಧಿಕಾರಿಗಳಿಗೆ ಮಾಹಿತಿ 
ಇಲ್ಲದ ಮೇಲೆ ಗುತ್ತಿಗೆದಾರರು ಯಾರ ಗುಲಾಮವಾಗಿದ್ದಾರೆ ಎಂದು ಯೋಚನೆ 
ಮಾಡಬೇಕಾಗುತ್ತದೆ. ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. 
ಯಾರು ಸಂಬಂಧ ಪಟ್ಟಿದ್ದಾರೆ ತಿಳುವಳಿಕೆಯಿಂದ ಕೆಲಸ ಮಾಡಬೇಕು. ಸರಕಾರದ 
ಹಣವನ್ನು ಈತರ ವೆಚ್ಚ ಮಾಡುವುದಾದರೇ ಅಭಿವೃದ್ಧಿ ಕಾಮಗಾರಿಗಳು ಎಲ್ಲಿ 
ನಡೆಯುತ್ತದೆ. ಎಲ್ಲಿ ರಸ್ತೆ ಗುಂಡಿ ಇದೆ ಅಲ್ಲಿ ಕೆಲಸ ನಡೆಯಲಿ ಎಂಬುದು ನನ್ನ 
ಉದ್ದೇಶ. ನನ್ನ ನಿವಾಸದ ಮುಂದೆಯೇ ರಸ್ತೆ ಕಾಮಗಾರಿ ಮಾಡುವ ಉದ್ದೇಶ 
ಏನಿತ್ತು. ಇದಕ್ಕೆ ಉತ್ತರ ಕೊಡಬೇಕು ಇಲ್ಲವಾದರೇ ಹೋರಾಟ ನಡೆಸಬೇಕಾದ 
ಅನಿವಾರ್ಯತೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

Post a Comment

0 Comments