ಸಂಪೂರ್ಣವಾಗಿ ಟಾರ್ಪಲ್ ಹಾಕಿ ಗೋವುಗಳನ್ನು ಸಾಗಾಟ
ಮಾಡಲಾಗುತ್ತಿತ್ತು. ಗ್ರಾಮಾಂತರ ಠಾಣೆ ಪಿಎಸ್‍ಐ ಚಂದ್ರಶೇಖರ್
ನೇತೃತ್ವದ ತಂಡ ತಕ್ಷಣ ಲಾರಿಯನ್ನು ಪರಿಶೀಲಿಸಿ ಲಾರಿಯಲ್ಲಿದ್ದ
ಇಬ್ಬರು ಚಾಲಕರನ್ನು ಬಂಧಿಸಿದ್ದು, ಬಂಧಿತರು ಹರ್ಯಾಣಾ
ರಾಜ್ಯ, ಕೈತಾಲ್ ಜಿಲ್ಲೆ, ರಾಜವುಂಡ್ ಗ್ರಾಮದ ವಿಕಾಸ್ ಹಾಗೂ
ಕರ್ನಾಲ್ ಜಿಲ್ಲೆ ಚೊಚರಾನ್ ಗ್ರಾಮದ ಅನಿಲ್ ಕುಮಾರ
ಎಂದು ತಿಳಿದು ಬಂದಿದೆ. ಗೋವುಗಳನ್ನು ಉತ್ತರ ಪ್ರದೇಶ
ರಾಜ್ಯದಿಂದ ತುಂಬಿಕೊಂಡು ಕೇರಳ ರಾಜ್ಯದ ಪಾಲಕ್ಕಾಡ್‍ಗೆ
ತೆಗೆದುಕೊಂಡು ಹೋಗಲಾಗುತ್ತಿದ್ದು ಹರ್ಯಾಣ ರಾಜ್ಯದ
ಕರ್ನಾಲ್ ಜಿಲ್ಲೆಯ ಜುಂದಗೇಟ್ ನಿವಾಸಿ ಸಂದೀಪ್ ಕುಮಾರ
ಎಂಬುವರು ಗೋವುಗಳನ್ನು ಯಾವುದೆ ಪರವಾನಗಿ ಇಲ್ಲದೆ
ತುಂಬಿಸಿ ಕಳುಹಿಸಿದ್ದರೆಂದು ತಿಳಿದು ಬಂದಿದೆ. ಆರಕ್ಷಕ ವೃತ್ತ
ನಿರೀಕ್ಷಕ ಗಿರೀಶ್.ಬಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು
ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಗೋವುಗಳನ್ನು
ಮೈಸೂರಿನ ಪಿಂಜರ್ ಪೆÇೀಲ್ ಗೋಶಾಲೆಗೆ ಕಳುಹಿಸಿ
ಕೊಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಗೋ
ಸಾಗಾಟ ಮಾಡಲಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂದು
ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ.
0 Comments