ಹಾಸನ: ಕರೆಮಾಡಿ ಅರ್ಧಗಂಟೆಯಾದರೂ ಬಾರದ ಅಂಬುಲೆನ್ಸ್ ; ವ್ಯಕ್ತಿ ರಸ್ತೆಯಲ್ಲೇ ಸಾವು




ಹಾಸನ: ಹಬ್ಬಕ್ಕೆ ದಿನಸಿ ಖರೀದಿಸಲು ಬಂದ ವ್ಯಕ್ತಿ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದು ರಸ್ತೆಯಲ್ಲಿ ಸಾವನ್ನಪ್ಪಿದ್ದಾರೆ.

ಹಾಸನದ ಎಂಜಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ 10:45 ರ ಸುಮಾರಿಗೆ ವ್ಯಕ್ತಿಯೊಬ್ಬರು ಎಂಜಿ ರಸ್ತೆಗೆ ಕುಟುಂಬದವರ ಜೊತೆಗೆ ಹಬ್ಬಕ್ಕೆ ದಿನಸಿ ಖರೀದಿಸಲು ಬಂದಿದ್ದಾರೆ. ಈ ವೇಳೆ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.
 
ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದರೂ ಸುಮಾರು ಅರ್ಧ ಗಂಟೆ ಆಂಬುಲೆನ್ಸ್ ತಡವಾಗಿ ಬಂದಿದೆ. ಅಷ್ಟರಲ್ಲಾಗಲೇ ವ್ಯಕ್ತಿಯ ಪ್ರಾಣ ಹೋಗಿದೆ.

ಕರೆಮಾಡಿ ಅರ್ಧಗಂಟೆಯಾದರೂ ಅಂಬುಲೆನ್ಸ್ ಬಾರದ ಪರಿಣಾಮ ವ್ಯಕ್ತಿ ರಸ್ತೆಯಲ್ಲೇ ಪ್ರಾಣಬಿಟ್ಟಿದ್ದಾರೆ. ಇದನ್ನು ನೋಡಿ ಆಕ್ರೋಶಗೊಂಡ ಸಂಬಂಧಿಕರು, ಅಂಬುಲೆನ್ಸ್ ಇರುವುದು ಕಷ್ಟದಲ್ಲಿರುವವರ ಸಹಾಯಕ್ಕೆ. ಇಷ್ಟು ತಡವಾಗಿ ಬಂದರೆ ಹೇಗೆ ಎಂದು ಅಂಬುಲೆನ್ಸ್ ಸಿಬ್ಬಂದಿಗೆ ಹೊಡೆಯಲು ಮುಂದಾಗಿದ್ದಾರೆ. ತಕ್ಷಣ ಅವರನ್ನು ಸಮಾಧಾನ ಮಾಡಿದ ಸ್ಥಳೀಯರು, ಇನ್ನಾದರೂ ಸರಿಯಾದ ಸಮಯಕ್ಕೆ ಬನ್ನಿ. ಇಲ್ಲೇ ಇದ್ದರೆ ಜನ ಆಕ್ರೋಶದಿಂದ ನಿಮ್ಮ ಮೇಲೆ ಹಲ್ಲೆ ಮಾಡುತ್ತಾರೆ, ಹೊರಡಿ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ.

Post a Comment

0 Comments