ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ

ಆಲೂರು ತಾಲೂಕಿನ ಮಡಬಲು ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ
#ವರದಿ ಸತೀಶ್ ಚಿಕ್ಕಕಣಗಾಲ್
#ಆಲೂರು* : ಕರ್ತವ್ಯ ನಿರತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಮಂಗಳವಾರ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿ ಕಚೇರಿ ಪಿಠೋಪಕರಣ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾ.ಪಂ ಪಿಡಿಓ ಮಹಮದ್ ಎಂಬವರ ಮೇಲೆ ಅದೇ ಗ್ರಾಮದ ಪುಟ್ಟರಾಜು (೪೭) ಇಂದು ಕಚೇರಿಗೆ ಬಂದು ಮಚ್ಚಿನಿಂದ ಈ ಹಲ್ಲೆ ನಡೆಸಿ ಇಷ್ಟಕ್ಕೆ ಮಾತ್ರವಲ್ಲದೆ ಕಚೇರಿಯ ಕಂಪ್ಯೂಟರ್, ಕುರ್ಚಿ ಹಾಗೂ ಟೇಬಲ್‌ಗಳಿಗೆ ಹಾನಿಯುಂಟು ಮಾಡಿದ್ದಾನೆ. ತೀವ್ರ ಗಾಯಗೊಂಡಿರುವ ಪಿಡಿಓ ಮಹಮದ್ ರವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Post a Comment

0 Comments