ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ಹಾಸನ ಪೊಲೀಸರು; ಜನನಿಬಿಡ ಜಾಗದಲ್ಲಿ ಗಲಾಟೆ ಮಾಡುತ್ತಿದ್ದ ಪುಂಡರಿಗೆ ಲಾಠಿ ರುಚಿ

ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟ ಹಾಸನ ಪೊಲೀಸರು; ಜನನಿಬಿಡ ಜಾಗದಲ್ಲಿ ಗಲಾಟೆ ಮಾಡುತ್ತಿದ್ದ ಪುಂಡರಿಗೆ ಲಾಠಿ ರುಚಿ

ಹಾಸನ: ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡುತ್ತ ಆತಂಕ
ಮೂಡಿಸುತ್ತಿದ್ದ ಯುವಕರಿಗೆ ಸಿನಿಮೀಯ ಶೈಲಿಯಲ್ಲಿ ಬಂದ
ಹಾಸನ ಪೊಲೀಸರು ಬಿಸಿಮುಟ್ಟಿಸಿ ಎತ್ತಾಕಿಕೊಂಡು ಹೋದ
ಘಟನೆ ನಡೆದಿದೆ. ಲಾಕ್‌ಡೌನ್ ನಂತರ ಹಾಸನದಲ್ಲಿ ಅಪರಾಧ
ಚಟುವಟಿಕೆಗಳು ಹೆಚ್ಚಾಗಿದ್ದವು. ಯುವಕರು ಕುಡಿದು ಗಲಾಟೆ
ಮಾಡಿಕೊಳ್ಳುವುದು ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸರು
ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ರು ಕೆಲವರು ತಮ್ಮ ನಡತೆ
ಬದಲಾಯಿಸಿಕೊಂಡಿರಲಿಲ್ಲ. ಹೀಗಾಗಿ ಹಾಸನ ಪೊಲೀಸರು
ಸಾರ್ವಜನಿಕರ ಬಳಿ ನಿಮಗೆ ಯಾರಾದ್ರು ಗಲಾಟೆ ಮಾಡುವುದು
ಕಂಡು ಬಂದರೆ ಒಂದು ಕರೆ ಮಾಡಿ ನಮಗೆ ತಿಳಿಸಿ. ಪುಂಡರಿಗೆ
ನಾವು ಬುದ್ದಿ ಕಲಿಸಿ ಮುಂದಾಗುವ ಅನಾಹುತ ತಪ್ಪಿಸುತ್ತೇವೆ
ಎಂದು ಮನವಿ ಮಾಡಿದ್ರು. ಇಂದು ಹಾಸನದ ಬಸಟ್ಟಿಕೊಪ್ಪಲು
ಬಳಿ ಯುವಕರ ತಂಡವೊಂದು ಕುಡಿದ ಮತ್ತಿನಲ್ಲಿ ಕೊರಳಪಟ್ಟಿ
ಹಿಡಿದುಕೊಂಡು ಗಲಾಟೆ ಮಾಡುತ್ತಿತ್ತು. ಇದನ್ನು ನೋಡಿ
ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ರು. ವಿಷ್ಯ ತಿಳಿದ
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪುಂಡರಿಗೆ ಲಾಠಿ ರುಚಿ
ತೋರಿಸಿ ಜೀಪಿನಲ್ಲಿ ಎತ್ತಾಕಿಕೊಂಡು ಹೋಗುವ ಮೂಲಕ
ಗಲಾಟೆ ಮಾಡುವ ಪುಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
.

Post a Comment

0 Comments