ಅರಸೀಕೆರೆ:-ಕೊಬ್ಬರಿ ಧಾರಣೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸಲು ನಾಫೇಡ್ ಖರೀದಿ ಕೇಂದ್ರವನ್ನು ಆರಂಭಿಸಲಾಯಿತಾದರೂ ಎಲ್ಲಾ ಬೆಳೆಗಾರರಿಂದ ಖರೀದಿ ಮಾಡಲು ಮುಂದಾಗದ ನಾಫೇಡ್ ಜೂನ್ 25ರೊಳಗೆ ನೊಂದಾಯಿಸಿಕೊಂಡವರ ಕೊಬ್ಬರಿ ಮಾತ್ರ ಖರೀದಿಸುವುದಾಗಿ ಹೇಳುತ್ತಿದ್ದು ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ಎಲ್ಲಾ ಬೆಳೆಗಾರರ ಕೊಬ್ಬರಿ ಖರೀದಿ ಮಾಡಬೇಕು ಹಾಗೂ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1200ರೂ ಪೆÇ್ರೀತ್ಸಾಹ ಧನ ನೀಡಬೇಕೆಂದು ಆಗ್ರಹಿಸಿ ಜೂನ್ 29ರಂದು ಪ್ರವಾಸಿ ಮಂದಿರದಿಂದ ಮೌನ ಮೆರವಣಿಗೆ ನಡೆಸಿ ತಾಲೂಕು ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯ ರೂಪುರೇಷೆ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ ನಗರದ ಎ.ಪಿ.ಎಂ.ಸಿ ಆವರಣದಲ್ಲಿ ನಾಫೇಡ್ ಮೂಲಕ ಕೊಬ್ಬರಿ ಖರೀದಿಸಲಾಗುತ್ತಿದ್ದರೂ ಎಲ್ಲಾ ಬೆಳೆಗಾರರಿಂದ ಕೊಬ್ಬರಿ ಖರೀದಿಸಲು ಮುಂದಾಗದೆ ಕೇವಲ 700ಮಂದಿಯನ್ನು ನೊಂದಾಯಸಿಕೊಂಡು ಅವರಿಂದ ಕೊಬ್ಬರಿ ಖರೀದಿ ಮಾಡಲಾಗುತ್ತಿದೆ ಎಂದು ದೂರಿದರು.
ನಾಫೇಡ್ ಖರೀದಿ ಕೇಂದ್ರ ಆರಂಭವಾಗಿರುವ ಬಗ್ಗೆ ರೈತರಿಗೆ ಇನ್ನೂ ಮಾಹಿತಿಯೇ ದೊರೆತ್ತಿಲ್ಲ ನಿಜವಾದ ರೈತರು ಕೊಬ್ಬರಿ ಮಾರಾಟಕ್ಕೆ ಈಗ ಬರುತ್ತಿದ್ದು ಅವರಿಂದ ಕೊಬ್ಬರಿ ಖರೀದಿ ಮಾಡದೆ ವಾಪಸ್ಸು ಕಳಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಎಲ್ಲಾ ಬೆಳೆಗಾರರಿಂದ ನಾಫೇಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕು ಮತ್ತು ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ 1200ರೂ ಪೆÇ್ರೀತ್ಸಾಹ ಧನ ನೀಡಬೇಕೆಂದು ಒತಾಯಿಸಿ ಪ್ರತಿಭಟನೆಗಿಳಿಯುವುದಾಗಿ ಹೇಳಿದರು,
ಬುಧುವಾರ ನಗರದ ಪ್ರವಾಸಿ ಮಂದಿರದಿಂದ ಬೆ.11ಕ್ಕೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ತಾಲೂಕು ಕಚೇರಿಗೆ ತೆರಳಿ ಧರಣಿ ನಡೆಸಲಾಗುವುದು ಈ ಸಂದರ್ಭದಲ್ಲಿ ಕರೋನಾ ಸೊಂಕಿನ ಹಿನ್ನಲೆಯಲ್ಲಿ ಪ್ರತಿಭಟನೆ ಧರಣಿ ಸಂದರ್ಭದಲ್ಲಿಯೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗುವುದು ಎಂದು ನುಡಿದರು.
ಮಳೆಯ ಅಭಾವ ,ಅಂತರ್ಜಲ ಕೊರತೆ ,ತೆಂಗಿಗೆ ಮಹಾಮಾರಿಯಂತೆ ಎರಗಿದ ರೋಗಗಳಿಂದ ತೆಂಗು ಸುಳಿಬಿದ್ದು ನಾಶದ ಹಂಚಿಗೆ ತಲುಪಿರುವ ತೆಂಗು ಬೆಳೆಗಾರರಿಗೆ ಕರೋನಾ ಸಂಕಷ್ಟದಿಂದ ತೀವ್ರ ನಷ್ಟ ಅನುಭವಿಸಿದ್ದು ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ ಅವರು ಸರ್ಕಾರ ಬೆಳೆಗಾರರಿಗೆ ಪೆÇ್ರೀತ್ಸಾಹ ಧನ ನೀಡಬೇಕು ಹಾಗೂ ಹೊಸದಾಗಿ ಕೊಬ್ಬರಿ ಮಾರಾಟಕ್ಕೆ ಬರುವ ರೈತರಿಂದ ಬರುವ ಕೊಬ್ಬರಿ ಖರೀದಿಸುವಂತೆ ನಾಫೇಡ್ ಸಿಬ್ಬಂಧಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಪ್ರತಿಭಟನೆಯ ಸ್ವರೂಪವನ್ನು ಬದಲಾಯಿಸಿಕೊಳ್ಳುವುದಾಗಿ ಎಚ್ಚರಿಸಿದ ಅವರು ತೆಂಗು ಬೆಳೆಗಾರರ ಹಿತ ಕಾಯಲು ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಲ್ಲದೆ ಎಂತಹ ಹೋರಾಟಕ್ಕೂ ತಾವು ಸಿದ್ಧವಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಹೆಚ್ ಹುಚ್ಚೇಗೌಡ ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ ,ಜೆ.ಡಿ.ಎಸ್ ಮುಖಂಡರಾದ ಗಂಗಾಧರ್ ,ಧರ್ಮಶೇಖರ್, ಧರ್ಮೇಶ್ ,ಅಡವಿ ಸ್ವಾಮಿ ,ವೈ.ಕೆ ದೇವರಾಜ್ ಹಾಗೂ ಇನ್ನಿತರರು ಇದ್ದರು.
0 Comments