ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಾನಕರೆ ಗ್ರಾಮದಲ್ಲಿ ದಿನಾಂಕ 03/07/2920 ರಂದು ಬೆಳಗ್ಗೆ 9-30 ಗಂಟೆಯ ಸಮಯದಲ್ಲಿ ಸಿರಾದಿಯವರಾದ ಶ್ರೀಮತಿ ಶೀಲಾ ಕೋಂ ಲೇಟ್ ಹೇಮಂತ್ ಕುಮಾರ್ ಅವರು ಕೆಲಸಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ, ವಾಪಸ್ ಮಧ್ಯಾಹ್ನ 3-30 ಗಂಟೆಗೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗುತ್ತಾರೆಂದು ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಯ ಪತ್ತೆಗೆ ಬಗ್ಗೆ ವಿಶೇಷ ತಂಡ ರಚನೆ :
ಈ ಪ್ರಕರಣದಲ್ಲಿ ಕಳವು ಮಾಡಿರುವ ಆರೋಪಿಗಳ ಪತ್ತೆ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರವರು ಹಾಸನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ಅವರ ಉಸ್ತುವಾರಿಯಲ್ಲಿ ಸಕಲೇಶಪುರ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಶ್ರೀ ಗೋಪಿ ರವರ ನೇತೃತ್ವದಲ್ಲಿ ಸಕಲೇಶಪುರ ವೃತ್ತ ನಿರೀಕ್ಷಕರಾದ ಶ್ರೀ ಗಿರೀಶ್ ಮತ್ತು ಸಕಲೇಶಪುರ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ರಾಘವೇಂದ್ರ ರವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ಆರೋಪಿಯ ಪತ್ತಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿರುವ ದಿನಾಂಕ 23/07/2020 ರಂದು ಸಂಜೆ 7-30) ಗಂಟೆಯ ಸಮಯದಲ್ಲಿ ಬಾಳ್ಳುಪೇಟೆಯ బళి ಇರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಆರೋಪಿಗಳನ್ನು ವಿಶೇಷ ತಂಡವು ಹೋಗಿ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೆಚ್ಚಿನ ವಿಚಾರಣೆಗೆ ಪಡಿಸಲಾಯಿತು.
ಆರೋಪಿಗಳ ವಿವರ :
1, ಸಚಿನ್ ಕುಮಾರ್ ಬಿನ್ ಮಾದಪ್ಪ 31 ವರ್ಷ,ಎಲೆಚಾಕನಹಳ್ಳಿ ಗ್ರಾಮ, ಕಸಬಾ ಹೋಗ ಹೊಳೆನರಸಿಪುರ ತಾಃ ಹಾಸನ 2, ನವೀನ್ ಬಿನ್ ರಂಗೇಗೌಡ, 23 ವರ್ಷ, ಕೆ ಆರನೇಸಂದ್ರ ಗ್ರಾಮ, ಸಿ.ಎಸ್.ಪುರ ಹೋ ಗುಬ್ಬಿ ತಾ ತುಮಕೂರು ಜಿಲ್ಲೆ
3, ಸುನಿಲ್ ಬಿನ್ ಅಮಾಸೇಗೌಡ, 25 ವರ್ಷ, ಮಂಡಿಕೊಪ್ಪಲು ( ಕೆ. ದಾಸಾಪುರ ) ಗ್ರಾಮ, ಬಾಗೂರು ಹೋll, ಚನ್ನರಾಯಪಟ್ಟಣ ತಾ||, ಹಾಸನ
0 Comments