ಕಾಡಾನೆ ಸಮಸ್ಯ ಪರಿಹಾರಕ್ಕೆ ಅಧಿಕಾರಿಗಳ ಸಭೆ ಶೀಘ್ರ: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ

ಕಾಡಾನೆ  ಸಮಸ್ಯ ಪರಿಹಾರಕ್ಕೆ  ಅಧಿಕಾರಿಗಳ ಸಭೆ ಶೀಘ್ರ: ಜೆಡಿಎಸ್ ರಾಜ್ಯಾಧ್ಯಕ್ಷ  ಕುಮಾರಸ್ವಾಮಿ

ಸಕಲೇಶಪುರ: ಕಾಡಾನೆ ಹಾವಳಿ ಸಮಸ್ಯೆ ಪರಿಹಾರಕ್ಕೆ ಶೀಘ್ರವಾಗಿ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು ಎಂದು ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ಭರವಸೆ ನೀಡಿದರು.

ತಾಲೂಕಿನ ಬೆಳಗೊಡು ಹೋಬಳಿಯಲ್ಲಿ ಕಳೆದ‌ ಎರಡು ತಿಂಗಳುಗಳಿಂದ ಕಾಡಾನೆ ಹಾವಳಿಗೀಡಾದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲಿಸಿದ ನಂತರ ಹಲಸುಲಿಗೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ  ಏರ್ಪಡಿಸಿದ್ದ  ಸಂತ್ರಸ್ತ ಬೆಳೆಗಾರರ ಸಭೆಯಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ  ಕಾಡಾನೆ ಸಮಸ್ಯೆಯಿಂದ ಬೆಳೆಗಾರರು ರೈತಾಪಿ ಜನರು ಬಾರಿ ಸಂಕಷ್ಟ ಕ್ಕೆ ಈಡಾಗಿದ್ದು ಈ ಕುರಿತು ಶೀಘ್ರ ಹಾಗೂ ವ್ಯಜ್ಞಾನಿಕವಾಗಿ ಪರಿಹಾರವನ್ನು ನೀಡುವಂತೆ ಕಳೆದ ಒಂದು ತಿಂಗಳ ಹಿಂದೆ ನಡೆದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು ಆದರೆ ಸರ್ಕಾರ  ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಕೇವಲ ವರ್ಗಾವಣೆ ದಂತೆಯಲ್ಲಿ ನಿರತರಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಕಾಡಾನೆ ಹಾವಳಿಯಿಂದ ಬೆಳೆ ನಷ್ಟ ಅನುಭವಿಸುವ ಬೆಳೆಗಾರರಿಗೆ ಈಗ‌ನೀಡುತ್ತಿರುವ ಪರಿಹಾರ ತೀರ ಕಡಿಮೆಯಾಗಿದ್ದು ಹಾಲಿ ನೀಡುತ್ತಿರುವ ಮೊತ್ತದ ಹತ್ತು ಪಟ್ಟಾದರು ನೀಡ ಬೇಕೆಂದು ಶಾಸಕರು ಆಗ್ರಹಿಸಿದರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅತಿ ಶೀಘ್ರದಲ್ಲಿ ಆನೆಹಾವಳಿ ಪ್ರದೇಶದಲ್ಲಿ ,ಬೆಳೆಗಾರರ, ಅಧಿಕಾರಿಗಳ, ಸರ್ವ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಸದಸ್ಯರ ಸಭೆ ಕರೆಯಲಾಗುತ್ತದೆ ಎಂದರು.

 ಸಭೆಯಲ್ಲಿ ಹಲವಾರು ಬೆಳೆಗಾರರು ತಾವುಗಳು‌ ಅನುಭವಿಸುತಿರುವ ತೊಂದರೆಗಳ ಬಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳದೆ ಇದ್ದರೆ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗ‌ಬೇಕಾಗುತ್ತದೆ ಎಂದು ಎಚ್ಚರಿಸಿದರು. 

  ತಾ.ಪಂ. ಸದಸ್ಯೆ ಚ್ಯತ್ರಾ ನವೀನ್, ಎ.ಪಿ.ಎಂ.ಸಿ ಅಧ್ಯಕ್ಷ ಕವನ್ ಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಗುರು ಮೂರ್ತ, ವ್ಯೆ.ಎಸ್.ಗಿರೀಶ್, ರಮೇಶ್, ರೋಹಿತ್ ಹಾಗೂ ಹಲವು ಬೆಳೆಗಾರರು ಭಾಗವಹಿಸಿದರು.

Post a Comment

0 Comments