ಅಲಂಕಾರ್ ಲಾಡ್ಜ್ ನಲ್ಲಿ ಜೂಜಾಡುತ್ತಿದ್ದ ಕುಖ್ಯಾತ 7 ಜನ ಜೂಜುಕೂರರ ಬಂಧನ-ನಗದು ವಶ:
ಸಕಲೇಶಪುರ:
ನಗರ ಬಿ.ಎಂ. ರಸ್ತೆ ಟೋಲ್ಗೇಟ್ ಹತ್ತಿರ ಅಲಂಕಾರ್ ಲಾಡ್ಜ್ನಲ್ಲಿ ಜೂಜಾಡುತ್ತಿದ್ದ 7 ಜನರನ್ನು ಪೋಲಿಸರು ಬಂದಿಸಿ ಹಣ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದುಸಕಲೇಶಪುರ ನಗರ ಠಾಣೆ.ಪಿಎಸ್ಐ
ಬಿ.ಎನ್. ರಾಘವೇಂದ್ರ, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿನಡೆಸಿ ಜೂಜಾಡುತ್ತಿದ್ದವರನ್ನು ಬಂದಿಸಿದ್ದಾರೆ. ಆರೋಪಿಗಳ ವಿವರ: ಆರೀಫ್ ಬಿನ್ ಅಬ್ದುಲ್ ಗಫಾರ್ 35 ವರ್ಷ, ಬಿಲಾಲ್ ರಸ್ತೆ, ಕುಶಾಲನಗರ ಬಡಾವಣೆ, ಸಕಲೇಶಪುರ ಟೌನ್, ವಿಜಯ್ ಕುಮಾರ್ ಬಿನ್ ಚಂದ್ರಶೇಖರ್ 35 ವರ್ಷ, ಬಾಳೇಗದ್ದೆ ಸಕಲೇಶಪುರ. ಶಾನ್ವಾಜ್ ಬಿನ್ ಅಬ್ದುಲ್ ಗಫಾರ್, 32 ವರ್ಷ, ಬಿಲಾಲ್ ಮಸೀದಿ ರಸ್ತೆ, ಕುಶಾಲನಗರ ಬಡಾವಣೆ, ಸಕಲೇಶಪುರ. ಗೌಸ್ ಮೊಹಿದ್ದೀನ್ ಬಿನ್ ಹಸೇನಾರ್, 38 ವರ್ಷ, ಮಹೇಶ್ವರಿ ನಗರ, ಸಕಲೇಶಪುರ. ಅಬ್ದುಲ್ ಲತೀಫ್ ಬಿನ್ ಅಬ್ದುಲ್ ಸಲೀಂ, 35 ವರ್ಷ, ಬಾಳೇಗದ್ದೆ ಸಕಲೇಶಪುರ. ಯೋಗೇಶಗೌಡ ಬಿನ ಅಣ್ಣೇಗೌಡ, 42 ವರ್ಷ, ಮಾರನಹಳ್ಳಿ ಗ್ರಾಮ, ಹಾನುಬಾಳು ಹೋಬಳಿ, ಸಕಲೇಶಪುರ ಅಬ್ದುಲ್ ಖಾದರ್ ಬಿನ್ ಬಾಬುಬೇರಿ, 45 ವರ್ಷ, ಕಾರು ಚಾಲಕ, ಗುಲಗಳಲೆ ಗ್ರಾಮ, ಸಕಲೇಶಪುರ. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 10600/-ನಗದನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೋಂಡಿದ್ದಾರೆ.
0 Comments