ಕೊಣನೂರು: ಸಮೀಪದ ಕೆರೆಕೋಡಿ ಗ್ರಾಮದಲ್ಲಿನ ಕೊರೊನಾ ಸೋಂಕಿತನ ಸಂಪರ್ಕದಲ್ಲಿದ್ದ 5 ಜನರಿಗೆ ಸೋಂಕು ದೃಢಪಟ್ಟಿದೆ.
ಕಳೆದೆರಡು ದಿನಗಳ ಹಿಂದೆ ಸೋಂಕು ಖಚಿತವಾಗಿದ್ದ ಕೊಣನೂರು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸೋದರ, ಸೋದರನ ಪತ್ನಿ, ತಾಯಿ, ಅಜ್ಜಿ ಮತ್ತು ಸಂಬಂಧಿಯೊಬ್ಬರಿಗೆ ಕೋವಿಡ್ -19 ಸೋಂಕು ತಗುಲಿದೆ.
ಕೊಣನೂರಿನ ಹಾರಂಗಿ ಕಚೇರಿ ರಸ್ತೆಯ ಗಂಡ-ಹೆಂಡತಿಗೂ ಸೋಂಕು ದೃಢಪಟ್ಟಿದ್ದು ಸೋಂಕಿತರ ಮನೆಯನ್ನು ಸೀಲ್ ಮಾಡಲಾಗಿದೆ.
0 Comments