ಚಿಕಿತ್ಸೆ ನೀಡಲು 7 ಖಾಸಗಿ ಆಸ್ಪತ್ರೆ ಒಪ್ಪಿಗೆಸೋಂಕಿತರಿಗೆ 290 ಬೆಡ್ ನೀಡಲು ನಿರ್ಧಾರ

ಚಿಕಿತ್ಸೆ ನೀಡಲು 7 ಖಾಸಗಿ ಆಸ್ಪತ್ರೆ ಒಪ್ಪಿಗೆ
ಸೋಂಕಿತರಿಗೆ 290 ಬೆಡ್ ನೀಡಲು ನಿರ್ಧಾರ 
 
ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಜಿಲ್ಲಾಡಳಿತದ ನಡುವೆ ಸೃಷ್ಟಿಯಾಗಿದ್ದ ಹಗ್ಗ ಜಗ್ಗಾಟ ಕಡೆಗೂ ಸುಖಾಂತ ಕಂಡಿದೆ. ಸರ್ಕಾರ ಗೊತ್ತು ಮಾಡಿದ್ದ ಒಟ್ಟು 16 ಖಾಸಗಿ ಆಸ್ಪತ್ರೆಗಳ ಪೈಕಿ 7 ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಒಪ್ಪಿವೆ. 
ಅದರಂತೆ ಕೆ.ಆರ್.ಪುರಂ ನಲ್ಲಿರುವ ಜನಪ್ರಿಯ ಆಸ್ಪತ್ರೆ, ಮಂಗಳ ಆಸ್ಪತ್ರೆ, ರಾಜೀವ್ ಆಸ್ಪತ್ರೆ, ಸಂಜೀವಿನಿ ಸಹಕಾರಿ ಆಸ್ಪತ್ರೆ, ಬಿ.ಎಂ.ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆ, ಸಾಲಗಾಮೆ ರಸ್ತೆಯಲ್ಲಿರುವ ಮತ್ತೊಂದು ಸಂಜೀವಿನಿ ಸಹಕಾರಿ ಆಸ್ಪತ್ರೆ ಮತ್ತು ಸಿಎಸ್‍ಐ ರೆಡ್‍ಫರ್ನ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಇನ್ನು ಮುಂದೆ ಚಿಕಿತ್ಸೆ ದೊರೆಯಲಿದೆ.
ಜಿಲ್ಲೆಯ ಕೋವಿಡ್-19 ಸೋಂಕಿತರು ಈ ಮೇಲ್ಕಂಡ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಚಿಕಿತ್ಸೆ ಸಂದರ್ಭದಲ್ಲಿ ಈ 7 ಆಸ್ಪತ್ರೆಗಳಲ್ಲಿ ಯಾವುದೇ ಕುಂದುಕೊರತೆ ಕಂಡು ಬಂದಲ್ಲಿ ನೋಡೆಲ್ ಅಧಿಕಾರಿ ಡಾ.ಕಾಂತರಾಜು ಕೆ.ಪಿ. ಅವರನ್ನು 9449843200 ಈ ನಂಬರಿನ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 08172-246575 ಗೆ ಸಂಪರ್ಕಿಸಲು ಕೋರಲಾಗಿದೆ.
290 ಬೆಡ್ ಮೀಸಲು:
ಇಷ್ಟೂ ಆಸ್ಪತ್ರೆಗಳಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಒಟ್ಟಾರೆ 290 ಬೆಡ್ ಮೀಸಲಿಡಲು ನಿರ್ಧರಿಸಲಾಗಿದೆ. ಜನಪ್ರಿಯ ಆಸ್ಪತ್ರೆ(40), ಮಂಗಳ ಆಸ್ಪತ್ರೆ(50) ರಾಜೀವ್ ಆಸ್ಪತ್ರೆ(50),ಸ್ಪರ್ಶ್ ಆಸ್ಪತ್ರೆ (40), ಸಂಜೀವಿನಿ 2 ಆಸ್ಪತ್ರೆಗಳಿಂದ 80 ಮತ್ತು ಸಿಎಸ್‍ಐ ಆಸ್ಪತ್ರೆಯವರು 30 ಬೆಡ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. 

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಈ ಮೊದಲು 16 ಖಾಸಗಿ ಆಸ್ಪತ್ರೆ ಮತ್ತು ಒಂದು ಲ್ಯಾಬ್ ಗುರುತು ಮಾಡಿತ್ತು. ಆದರೆ ಕೋವಿಡ್ ಮತ್ತು ನಾನ್ ಕೋವಿಡ್ ಎಂದು ವಿಂಗಡಣೆ ಮಾಡಿ ಸದ್ಯಕ್ಕೆ 7 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಸಿಗುವ ವ್ಯವಸ್ಥೆ ಮಾಡಲಾಗಿದೆ. ಉಳಿದ ಆಸ್ಪತ್ರೆಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು.

 ಕೆ.ಗೋಪಾಲಯ್ಯ, ಉಸ್ತುವಾರಿ ಸಚಿವ

Post a Comment

0 Comments