ಹಾಸನದಲ್ಲಿಂದು ಒಟ್ಟು 451 ಕರೋನ ಪಾಸಿಟಿವ್ ಪತ್ತೆ ಹಾಗೂ 9 ಸಾವು

ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 9 ಸಾವು

ಹಾಸನ,ಸೆ.30(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿಂದು ಕೊರೋನಾ ಸೋಂಕಿನಿಂದ 9 ಮಂದಿ ಮೃತರಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 331ಕ್ಕೆ ಏರಿಕೆಯಾಗಿದೆ. ಹೊಸದಾಗಿ 451 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 16,799ಕ್ಕೆ ಏರಿಕೆಯಾಗಿದೆ.  
ಜಿಲ್ಲಾಸ್ಪತ್ರೆಯಲ್ಲಿ 3,424 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 13,044 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 48 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇಂದು ಪತ್ತೆಯಾದ 451 ಕೊರೋನಾ ಸೋಂಕು ಪ್ರಕರಣಗಳಲ್ಲಿ 78 ಮಂದಿ ಅರಸೀಕೆರೆ ತಾಲ್ಲೂಕಿನವರಾಗಿದ್ದು, 55 ಮಂದಿ  ಚನ್ನರಾಯಪಟ್ಟಣ ತಾಲ್ಲೂಕಿನವರು, ಆಲೂರು ತಾಲ್ಲೂಕಿನಲ್ಲಿ 23 ಜನ, 193 ಮಂದಿ ಹಾಸನ ತಾಲ್ಲೂಕು, 41 ಜನ ಹೊಳೆನರಸೀಪುರ ತಾಲ್ಲೂಕು, 35 ಮಂದಿ ಅರಕಲಗೂಡು ತಾಲ್ಲೂಕು, ಬೇಲೂರು ತಾಲ್ಲೂಕಿನ 15 ಜನ, ಸಕಲೇಶಪುರ ತಾಲ್ಲೂಕಿನಲ್ಲಿ 10 ಮಂದಿಗೆ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.
***
ಈ ತನಕ 3ಜನ ಮೃತಪಟ್ಟಿದ್ದಾರೆ.

Post a Comment

0 Comments