ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಈ ಬಾರಿ ಹಬ್ಬದ ಅವಧಿಯಲ್ಲಿ ಪಟಾಕಿ ಮಾರಾಟ ನಿಷೇಧಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.
ದೀಪಾವಳಿ ಹಬ್ಬದ ವೇಳೆ ರಾಜಸ್ಥಾನದಲ್ಲಿ ಕೊರೋನಾ ಸೋಂಕು ಹರಡುವಿಕೆ ಮತ್ತೆ ಹೆಚ್ಚಾಗಲಿದೆ. ಹೀಗಾಗಿ ಪಟಾಕಿ ನಿಷೇಧ ಮಾಡುವುದರಿಂದ ಗುಂಪು ಸೇರುವುದು ನಿಯಂತ್ರಣ ಆಗಲಿದೆ. ಜೊತೆಗೆ ಪಟಾಕಿಯಿಂದ ವಾಯುಮಾಲಿನ್ಯ ಉಂಟಾಗುವ ಹಿನ್ನೆಲೆಯಲ್ಲಿ ಉಸಿರಾಟದ ತೊಂದ್ರೆ ಹೆಚ್ಚಾಗಲಿದೆ. ಅಲ್ದೇ ಕೊರೊನಾ ಸೋಂಕಿತ ರೋಗಿಗಳಿಗೆ ಉಸಿರಾಟ ಸಮಸ್ಯೆ ಹೆಚ್ಚಾಗುತ್ತದೆ ಅನ್ನೋ ಕಾರಣಕ್ಕೆ ಮುನ್ನೇಚ್ಚರಿಕೆಯಾಗಿ ಪಟಾಕಿ ಮಾರಾಟ ನಿಷೇಧಿಸಿ ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದ್ದು, ಪಟಾಕಿ ಪ್ರಿಯರಿಗೆ ನಿರಾಸೆ ತರಿಸಿದೆ.
0 Comments